7

ವಿಶ್ವದ ಅತಿದೊಡ್ಡ ಮೊಬೈಲ್‌ಫೋನ್ ಕಾರ್ಖಾನೆಗೆ ನೊಯಿಡಾದಲ್ಲಿ ಮೋದಿ ಚಾಲನೆ

Published:
Updated:

ನೊಯಿಡಾ (ನವದೆಹಲಿ): ವಿಶ್ವದ ಅತಿದೊಡ್ಡ ಮೊಬೈಲ್‌ಫೋನ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ದಕ್ಷಿಣ ಕೊರಿಯಾದ ಅಧ್ಯಕ್ಷ ಮೋನ್ ಜೇ ಜತೆಗೂಡಿ ಚಾಲನೆ ನೀಡಿದರು. ಈ ಘಟಕವು ವರ್ಷಕ್ಕೆ 1.20 ಕೋಟಿ ಮೋಬೈಲ್‌ಫೋನ್ ಉತ್ಪಾದಿಸಲಿದೆ. ಇದರಲ್ಲಿ ಶೇ70ರಷ್ಟು ಫೋನ್‌ಗಳು ದೇಶೀಯ ಮಾರುಕಟ್ಟೆಗೆ ಬರಲಿವೆ.

‘ಈ ಕೈಗಾರಿಕೆಯು ಜನರಿಗೆ ಶಕ್ತಿ ತುಂಬಿರುವುದಷ್ಟೇ ಅಲ್ಲ, ಮೇಕ್‌ ಇನ್ ಇಂಡಿಯಾ ಉಪಕ್ರಮಕ್ಕೆ ಹೊಸ ವೇಗ ದಕ್ಕಿಸಿಕೊಟ್ಟಿದೆ. ಉತ್ತರ ಪ್ರದೇಶಕ್ಕೆ ಮತ್ತು ಭಾರತಕ್ಕೆ ಇದು ಹೆಮ್ಮೆಯ ಸಂಗತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೆಹಲಿಯಿಂದ ನೋಯ್ಡಾಕ್ಕೆ ದಕ್ಷಿಣ ಕೊರಿಯಾದ ಅಧ್ಯಕ್ಷರೊಡನೆ ‘ಮೆಟ್ರೊ’ದಲ್ಲಿ ಮೋದಿ ಪ್ರಯಾಣಿಸಿದರು. ಇಬ್ಬರೂ ಪರಸ್ಪರ ಮಾತನಾಡುತ್ತಿರುವ ಚಿತ್ರಗಳನ್ನು ಮೋದಿ ಟ್ವೀಟ್ ಮಾಡಿದ್ದಾರೆ. ಈ ಚಿತ್ರಗಳ ಹಿನ್ನೆಲೆಯಲ್ಲಿ ಅಕ್ಷರಧಾಮ ದೇವಾಲಯ ಕಾಣಿಸುವುದು ವಿಶೇಷ.

ಹೊಸ ಸ್ಯಾಮ್‌ಸಂಗ್ ಕಾರ್ಖಾನೆಯು ವರ್ಷಕ್ಕೆ 1.20 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲಿದೆ. ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳಿಂದ ಕಂಪನಿಯ ಪ್ರತಿಷ್ಠಿತ ಎಸ್‌9 ಮಾದರಿಯ ಸ್ಮಾರ್ಟ್‌ಫೋನ್‌ವರೆಗೆ ಹಲವು ಮಾದರಿಗಳ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದಿಸಲಿದೆ.

ವಿಶ್ವದಲ್ಲಿ ಚೀನಾ ನಂತರ ಭಾರತವು ಸ್ಮಾರ್ಟ್‌ಫೋನ್‌ಗಳಿಗೆ ದೊಡ್ಡ ಮಾರುಕಟ್ಟೆ. 2021ರ ವೇಳೆಗೆ 78 ಕೋಟಿ ಇಂಟರ್ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇರುತ್ತವೆ ಎಂದು ಸಿಸ್ಕೊ ಸಿಸ್ಟಮ್ಸ್ ಅಂದಾಜಿಸಿದೆ. 2016ರಲ್ಲಿ 36 ಕೋಟಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇದ್ದವು. ಪ್ರಸ್ತುತ 40 ಕೋಟಿ ಭಾರತೀಯರ ಬಳಿ ಸ್ಮಾರ್ಟ್‌ಫೋನ್‌ಗಳಿವೆ. 32 ಕೋಟಿ ಮಂದಿ ಬ್ರಾಡ್‌ಬ್ಯಾಂಡ್ ಬಳಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 31

  Happy
 • 2

  Amused
 • 1

  Sad
 • 4

  Frustrated
 • 5

  Angry

Comments:

0 comments

Write the first review for this !