ಶನಿವಾರ, ಜೂನ್ 19, 2021
22 °C

ಯೂನಿಕಾರ್ನ್‌ ಪಟ್ಟಿಗೆ ಮೋಗ್ಲಿಕ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದ್ದಿಮೆಯಿಂದ ಉದ್ದಿಮೆಗೆ (ಬಿ2ಬಿ) ಇ–ಕಾಮರ್ಸ್‌ ಸೇವೆ ಒದಗಿಸುವ ಮೋಗ್ಲಿಕ್ಸ್‌ ನವೋದ್ಯಮವು 100 ಕೋಟಿ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತೀಯ ಯೂನಿಕಾರ್ನ್‌ಗಳ ಪಟ್ಟಿಗೆ ಸೇರಿದೆ.

₹ 7,400 ಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯದ ನವೋದ್ಯಮಗಳನ್ನು ಯೂನಿಕಾರ್ನ್‌ಗಳು ಎನ್ನಲಾಗುತ್ತದೆ. ಕಂಪನಿಯು ತನ್ನ ಈಚಿನ ‘ಸರಣಿ–ಇ’ಯಲ್ಲಿ ₹ 878 ಕೋಟಿ ಬಂಡವಾಳ ಸಂಗ್ರಹಿಸಿದ್ದು, ಇದರಿಂದ ಒಟ್ಟಾರೆ ಮಾರುಕಟ್ಟೆ ಮೌಲ್ಯವು 100 ಕೋಟಿ ಡಾಲರ್‌ಗೆ ತಲುಪಿದೆ.

ಕಂಪನಿಯು ಈಚೆಗೆ ಸಂಗ್ರಹಿಸಿರುವ ಬಂಡವಾಳದಲ್ಲಿ ಫಾಲ್ಕನ್‌ ಎಡ್ಜ್‌ ಕ್ಯಾಪಿಟಲ್‌, ಹಾರ್ವರ್ಡ್‌ ಮ್ಯಾನೇಜ್‌ಮೆಂಟ್‌ ಕಂಪನಿಯಿಂದ ಬಂದಿರುವ ಹೂಡಿಕೆಯೂ ಸೇರಿದೆ. ಮೋಗ್ಲಿಕ್ಸ್‌ನಲ್ಲಿ ಈಗಾಗಲೇ ಹೂಡಿಕೆ ಮಾಡಿರುವ ಟೈಗರ್‌ ಗ್ಲೋಬಲ್‌, ಸೀಕ್ವಿಯಾ ಕ್ಯಾಪಿಟಲ್‌ ಇಂಡಿಯಾ ಮತ್ತು ವೆಂಚರ್‌ ಹೈವೆ ಕಂಪನಿಗಳೂ ಸಹ ಬಂಡವಾಳ ಸಂಗ್ರಹದ ‘ಸರಣಿ–ಇ’ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು