ನವದೆಹಲಿ: ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರಬಹುದು, ಅರ್ಥ ವ್ಯವಸ್ಥೆಯಲ್ಲಿನ ಚಟುವಟಿಕೆಗಳು ಮಂದಗತಿಗೆ ತಿರುಗಬಹುದು ಎಂಬ ಅಂದಾಜು ಇರುವ ಸಂದರ್ಭದಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿರುವ ಕೇಂದ್ರ ಹಣಕಾಸು ಸಚಿವಾಲಯವು, ಮುಂದಿನ ತಿಂಗಳುಗಳಲ್ಲಿ ಬೇಡಿಕೆಗಳು ಕಡಿಮೆ ಆಗಬಹುದು ಎಂದು ಹೇಳಿದೆ.

ಆದರೂ ದೇಶದ ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಬಹುಮಟ್ಟಿಗೆ ಸದೃಢವಾಗಿವೆ. ತಯಾರಿಕೆ ಹಾಗೂ ಸೇವಾ ವಲಯದ ಪಿಎಂಐ ಸೂಚ್ಯಂಕ ಏರಿಕೆ ಕಾಣುತ್ತಿದೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಇದೆ. ವಿದೇಶಿ ವಿನಿಮಯ ಮೀಸಲು ಮೊತ್ತವು ಬಾಹ್ಯ ಆಘಾತಗಳಿಂದ ರಕ್ಷಣೆ ನೀಡುವಂತಿದೆ ಎಂದು ಮಾಸಿಕ ಆರ್ಥಿಕ ಅವಲೋಕನ ವರದಿಯಲ್ಲಿ ಸಚಿವಾಲಯ ಹೇಳಿದೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶುರುವಾದ ನಂತರದಲ್ಲಿ ಜಾಗತಿಕ ಪರಿಸ್ಥಿತಿ ಹೆಚ್ಚು ಸವಾಲಿನದ್ದಾಗಿದೆ. ಕಚ್ಚಾ ತೈಲದ ಬೆಲೆಯು ಜಾಸ್ತಿ ಆಗಿದೆ, ಹಣಕಾಸಿನ ಪರಿಸ್ಥಿತಿ ಬಿಗಿಗೊಂಡಿದೆ. ಪ್ರಮುಖ ಅರ್ಥವ್ಯವಸ್ಥೆಗಳ ಬೆಳವಣಿಗೆಯ ವೇಗವು ಬಲ ಕಳೆದುಕೊಂಡಿದೆ. ಈ ಎಲ್ಲವುಗಳ ಪರಿಣಾಮದಿಂದ ಭಾರತವು ಪೂರ್ತಿಯಾಗಿ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.