ಮೂಡಲಗಿ: ‘ಮೂಡಲಗಿಯ ಬಸವೇಶ್ವರ ಅರ್ಬನ್ ಕೋ ಆಪರೇಟವ್ ಕ್ರೆಡಿಟ್ ಸೊಸೈಟಿಯು 2025–26ನೇ ಆರ್ಥಿಕ ವರ್ಷದ ಕೊನೆಯಲ್ಲಿ ₹5.35 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ ತಿಳಿಸಿದರು.

ಇಲ್ಲಿಯ ಬಸವೇಶ್ವರ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಪ್ರಸಕ್ತ ಮಾರ್ಚ ಅಂತ್ಯದವರೆಗೆ ಆಗಿರುವ ಸೊಸೈಟಿಯ ಪ್ರಗತಿ ಕುರಿತು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ಪ್ರಸಕ್ತ ಮಾರ್ಚ್ ಅಂತ್ಯಕ್ಕೆ 11,436 ಷೇರುದಾರರು ಇದ್ದು, ₹6.90 ಕೋಟಿ ಷೇರು ಬಂಡವಾಳ, ₹27.21 ಕೋಟಿ ನಿಧಿಗಳನ್ನು, ₹274.36 ಕೋಟಿ ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸಿದೆ. ಸದಸ್ಯರಿಗೆ ಈವರೆಗೆ ₹208.34 ಕೊಟಿ ಸಾಲ ವಿತರಿಸಿದೆ’ ಎಂದರು.

‘ಸೊಸೈಟಿಯ ಗ್ರಾಹಕರ ಠೇವಣಿ ಭದ್ರತೆಗಾಗಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ₹81.34 ಕೋಟಿ ಠೇವಣಿ ಮಾಡಲಾಗಿದ್ದು, ₹321.67 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ₹ 1,544 ಕೋಟಿ ವಾರ್ಷಿಕ ವಹಿವಾಟು ಮಾಡಿದೆ. ಸೊಸೈಟಿಯು ಹೊಂದಿರುವ 18 ಶಾಖೆಗಳು ಪ್ರಗತಿಯ ಹಾದಿಯಲ್ಲಿ ಸಾಗಿವೆ’ ಎಂದು ಢವಳೇಶ್ವರ ತಿಳಿಸಿದರು.

ಸೊಸೈಟಿಯ ಉಪಾಧ್ಯಕ್ಷ ರವೀಂದ್ರ ಭಾಗೋಜಿ, ನಿರ್ದೇಶಕರಾದ ಬಸವರಾಜ ತೇಲಿ, ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ಶ್ರೀಶೈಲ್ ಮದಗಣ್ಣವರ, ಗಿರೀಶ ಢವಳೇಶ್ವರ, ದೇವಪ್ಪ ಕೌಜಲಗಿ, ಕುಸಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ, ಲಕ್ಷ್ಮಣ ತೇಳಗಡೆ, ರಾಘವೇಂದ್ರ ಕೆಸಪನಟ್ಟಿ, ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಹಾಗೂ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-21-1192128050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.