ಮಂಗಳವಾರ, ಜನವರಿ 18, 2022
27 °C

ಎಂಒಪಿ ರಸಗೊಬ್ಬರ: ಪ್ರತಿ ಚೀಲದ ಬೆಲೆ ₹ 1,700 ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ವಸ್ತುಗಳ ಬೆಲೆ ಏರಿಕೆ ಮತ್ತು ಬಂದರಿನಲ್ಲಿ ರಸಗೊಬ್ಬರ ನಿರ್ವಹಣಾ ವೆಚ್ಚ ಹೆಚ್ಚಾದ ಕಾರಣ ಪೊಟ್ಯಾಷ್ ರಸಗೊಬ್ಬರ ಬೆಲೆ ಏರಿಕೆಯಾಗಿದ್ದು, ಪ್ರತಿ ಚೀಲದ ಬೆಲೆ ₹1,700 ನಿಗದಿಯಾಗಿದೆ ಎಂದು ಕೃಷಿ ಇಲಾಖೆ ಹೇಳಿದೆ.

ದೇಶದಲ್ಲಿ ಎಂಒಪಿ ರಸಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ರಸಗೊಬ್ಬರದ ಗರಿಷ್ಠ ಮಾರಾಟದ ದರವನ್ನು ಸರಬರಾಜು ಸಂಸ್ಥೆಗಳೇ ನಿಗದಿ ಮಾಡುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ನಾಲ್ಕು ತಿಂಗಳಿಂದ ಅಂತರರಾಷ್ಟ್ರೀಯ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದಂತೆ ಎಂಒಪಿ ರಸಗೊಬ್ಬರದ ದರವೂ ಏರಿಕೆಯಾಗಿದೆ. ಇದರಿಂದ ಎಂಒಪಿ ರಸಗೊಬ್ಬರದ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಆದರೂ ಇಂಡಿಯನ್‌ ಪೊಟ್ಯಾಷ್‌ ಲಿಮಿಟೆಡ್‌ ಸಂಸ್ಥೆಯು ಅಂತರರಾಷ್ಟ್ರೀಯ ಸರಬರಾಜುದಾರರೊಂದಿಗೆ ಎಂಒಪಿ ರಸಗೊಬ್ಬರ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ ಎಂದೂ ಹೇಳಿದೆ.

ಈಗ ರಸಗೊಬ್ಬರದ ವಿನಿಮಯ ದರ, ಹೊಸ ಆಮದು ಬೆಲೆ. ಕಸ್ಟಮ್ಸ್‌ ಸುಂಕ ಹಾಗೂ ಜಿಎಸ್‌ಟಿ ಬಂದರಿನಲ್ಲಿ ರಸಗೊಬ್ಬರದ ನಿರ್ವಹಣೆಯ ಇತರ ವೆಚ್ಚಗಳೂ ಸೇರಿ ಒಟ್ಟು ದರವು ಪ್ರತಿ ಟನ್‌ಗೆ ₹40,147 ಎಂದು ನಿಗದಿಪಡಿಸಲಾಗಿದೆ.

ಇದರಲ್ಲಿ ಕೇಂದ್ರ ಸರ್ಕಾರವು ಪ್ರತಿ ಟನ್‌ ಎಂಒಪಿಗೆ ನೀಡುವ ರಿಯಾಯಿತಿ ದರ ₹6,070 ಹೊರತುಪಡಿಸಿದಲ್ಲಿ ಪ್ರತಿ ಟನ್ನಿನ ಮಾರಾಟ ದರವು ₹34,000 ಆಗುತ್ತದೆ. ಹೀಗಾಗಿ ಪ್ರತಿ ಚೀಲದ ದರವು ₹1,700 ಆಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು