ಸುದೀರ್ಘ ಬ್ಯಾಟರಿ ಸಾಮರ್ಥ್ಯದ ಮೊಟೊರೊಲಾ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ

7

ಸುದೀರ್ಘ ಬ್ಯಾಟರಿ ಸಾಮರ್ಥ್ಯದ ಮೊಟೊರೊಲಾ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ

Published:
Updated:
ಮೊಟೊ ಇ5 ಮತ್ತು ಇ5 ಪ್ಲಸ್‌ ಸ್ಮಾರ್ಟ್‌ಫೋನ್‌ 

ನವದೆಹಲಿ: ಮೊಟೊರೊಲಾ ಸಂಸ್ಥೆ ಮಂಗಳವಾರ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಸುದೀರ್ಘ ಬ್ಯಾಟರಿ ಸಾಮರ್ಥ್ಯದ ಫೋನ್‌ಗಳನ್ನು ಹೊರತಂದಿದೆ.

ಮೊಟೊ ಇ5 ಮತ್ತು ಮೊಟೊ ಇ5 ಪ್ಲಸ್‌ ಬಿಡುಗಡೆಯಾಗಿದ್ದು, ಈ ನೂತನ ಸ್ಮಾರ್ಟ್‌ಫೋನ್‌ಗಳ ಬೆಲೆ ಕ್ರಮವಾಗಿ ₹9,999 ಹಾಗೂ ₹11,999 ನಿಗದಿ ಪಡಿಸಲಾಗಿದೆ. 

ಲಿನೊವೊ ಮಾಲಿಕತ್ವದ ಮೊಟೊರೊಲಾ ಸುದೀರ್ಘ ಬ್ಯಾಟರಿ ಸಾಮರ್ಥ್ಯದ ಕಡೆಗೆ ಹೆಚ್ಚು ಗಮನ ಹರಿಸಿದ್ದು, ಮೊಟೊ ಇ5 ಪ್ಲಸ್‌ ಮಾದರಿ ಫೋನ್‌ಗಳಲ್ಲಿ 5000 ಎಂಎಎಚ್‌ ಬ್ಯಾಟರಿ ನೀಡಲಾಗಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ ಸಾಮಾನ್ಯ ಬಳಕೆಯ ನಂತರವೂ ಒಂದೂವರೆ ದಿನ ಬ್ಯಾಟರಿ ಚಾರ್ಜ್ ಉಳಿಯುವುದಾಗಿ ಕಂಪನಿ ಪ್ರಕಟಿಸಿದೆ. 18 ಗಂಟೆ ವಿಡಿಯೊ ವೀಕ್ಷಣೆ ಸಮಯ ಘೋಷಿಸಿಕೊಂಡಿದೆ. 

ಬಿಡುಗಡೆಯಾಗಿರುವ ಎರಡೂ ಮಾದರಿಯ ಫೋನ್‌ಗಳಲ್ಲಿ 10 ವ್ಯಾಟ್‌ ರಾಪಿಡ್‌ ಚಾರ್ಜರ್‌ ವ್ಯವಸ್ಥೆಯಿದ್ದು, ಬ್ಯಾಟರಿ ಬಹುಬೇಗ ಚಾರ್ಜ್‌ ಆಗುತ್ತದೆ. 6 ಇಂಚು ಪರದೆ ಹೊಂದಿರುವ ಇ5ಪ್ಲಸ್‌, ಲೇಸರ್‌ ಆಟೊಫೋಕಸ್‌ 12ಎಂಪಿ ಕ್ಯಾಮೆರಾ ಒಳಗೊಂಡಿದೆ. 

* ಮೊಟೊ ಇ5 ಪ್ಲಸ್‌

ಆಪರೇಟಿಂಗ್‌ ಸಿಸ್ಟಮ್‌: ಆ್ಯಂಡ್ರಾಯ್ಡ್‌ 8.0 ಒರಿಯೊ

ಮೆಮೊರಿ: 3 ಜಿಬಿ ರ‍್ಯಾಮ್/ 32 ಜಿಬಿ ಸ್ಟೊರೇಜ್‌

ಬ್ಯಾಟರಿ: 5000 ಎಂಎಎಚ್‌ 

ಪರದೆ: 6 ಇಂಚು ಎಚ್‌ಡಿ ಜತೆಗೆ 18:9 ಮ್ಯಾಕ್ಸ್‌ ವಿಶನ್‌ ಡಿಸ್‌ಪ್ಲೆ

ಕ್ಯಾಮೆರಾ: 12ಎಂಪಿ ಲೇಸರ್‌ ಆಟೊ ಫೋಕಸ್‌/ 8 ಎಂಪಿ ಸೆಲ್ಫಿ ಕ್ಯಾಮೆರಾ

ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್‌ 435

ಬೆಲೆ: ₹11,999

 

* ಮೊಟೊ ಇ5

ಆಪರೇಟಿಂಗ್‌ ಸಿಸ್ಟಮ್‌: ಆ್ಯಂಡ್ರಾಯ್ಡ್‌ 8.0 ಒರಿಯೊ

ಮೆಮೊರಿ: 2 ಜಿಬಿ ರ‍್ಯಾಮ್/ 16 ಜಿಬಿ ಸ್ಟೊರೇಜ್‌

ಬ್ಯಾಟರಿ: 4000 ಎಂಎಎಚ್‌ 

ಪರದೆ: 5.7 ಇಂಚು ಎಚ್‌ಡಿ ಜತೆಗೆ 18:9 ಮ್ಯಾಕ್ಸ್‌ ವಿಶನ್‌ ಡಿಸ್‌ಪ್ಲೆ

ಕ್ಯಾಮೆರಾ: 13ಎಂಪಿ/ 5ಎಂಪಿ ಸೆಲ್ಫಿ ಕ್ಯಾಮೆರಾ

ಪ್ರೊಸೆಸರ್‌: ಸ್ನ್ಯಾಪ್‌ಡ್ರಾಗನ್‌ 425

ಬೆಲೆ: ₹9,999

 

ಬರಹ ಇಷ್ಟವಾಯಿತೆ?

 • 15

  Happy
 • 4

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !