ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿಎಲ್‌ಗೆ ₹ 500 ಕೋಟಿ ನಷ್ಟ

2019–10ರ ಮೊದಲ ತ್ರೈಮಾಸಿಕದ ಫಲಿತಾಂಶ ಪ್ರಕಟ
Last Updated 3 ಆಗಸ್ಟ್ 2019, 18:36 IST
ಅಕ್ಷರ ಗಾತ್ರ

ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಮಂಗಳೂರು ಪೆಟ್ರೋಕೆಮಿಕಲ್ಸ್ ಆ್ಯಂಡ್‌ ರಿಫೈನರಿ ಲಿಮಿಟೆಡ್ (ಎಂಆರ್‌ಪಿಎಲ್) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ₹ 500 ಕೋಟಿ ನಷ್ಟ ಅನುಭವಿಸಿದೆ.

ಇಲ್ಲಿನ ಎಂಆರ್‌ಪಿಎಲ್ ಕಚೇರಿಯಲ್ಲಿ ಶನಿವಾರ ನಡೆದ ಕಂಪನಿಯ ಆಡಳಿತ ಮಂಡಳಿ ಸಭೆಯ ಬಳಿಕ 2019-20ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶವನ್ನು ಬಿಡುಗಡೆ ಮಾಡಲಾಯಿತು.

ಎಂಆರ್‌ಪಿಎಲ್ ಮತ್ತು ಒಎನ್‌ಜಿಸಿ ಕಂಪನಿ ಸಮೂಹದ ಅಧ್ಯಕ್ಷ ಶಶಿ ಶಂಕರ್ ಮತ್ತು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಅವರು ಈ ಮಾಹಿತಿ ನೀಡಿದರು.

ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು 38.5 ಲಕ್ಷ ಟನ್ ಕಚ್ಚಾ ತೈಲ ಶುದ್ಧೀಕರಿಸಲಾಗಿತ್ತು. ₹ 16,573 ಕೋಟಿ ವಹಿವಾಟು ನಡೆಸಿ ₹ 362 ಕೋಟಿ ನಿವ್ವಳ ಲಾಭ ಗಳಿಸಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 25.6 ಲಕ್ಷ ಟನ್ ಕಚ್ಚಾ ತೈಲ ಶುದ್ಧೀಕರಣ ಮಾಡಲಾಗಿದೆ. ₹ 11,191 ಕೋಟಿ ವಹಿವಾಟು ನಡೆದಿದ್ದು, ₹ 500 ಕೋಟಿ ನಷ್ಟವಾಗಿದೆ ಎಂದು ವಿವರಿಸಿದರು.

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ₹ 4,326 ಕೋಟಿ ಮೌಲ್ಯದ ರಫ್ತು ವಹಿವಾಟು ನಡೆಸಿತ್ತು. ಈ ಬಾರಿ ರಫ್ತು ವಹಿವಾಟಿನ ಪ್ರಮಾಣ ₹ 3,857 ಕೋಟಿಗೆ ಇಳಿಕೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT