ನವದೆಹಲಿ (ಪಿಟಿಐ): ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ (ಎಂಎಸ್ಎಂಇ) ಉದ್ದಿಮೆಗಳನ್ನು ಗುರಿಯಾಗಿಸಿಕೊಂಡ, ₹18,100 ಕೋಟಿ ಮೊತ್ತದ ತುರ್ತು ಸಾಲ ಖಾತರಿ ಯೋಜನೆಗೆ (ಇಸಿಎಲ್ಜಿಎಸ್) ಕೇಂದ್ರ ಸಚಿವ ಸಂಪುಟವು ಮಂಗಳವಾರ ಒಪ್ಪಿಗೆ ನೀಡಿದೆ.

ಈ ಯೋಜನೆಯು ವಿಮಾನಯಾನ ಕಂಪನಿಗಳು ಹಾಗೂ ಇತರ ಕೆಲವು ಕಂಪನಿಗಳನ್ನು ಕೂಡ ಒಳಗೊಳ್ಳಲಿದೆ. ಪಶ್ಚಿಮ ಏಷ್ಯಾದಲ್ಲಿನ ಸಮರದ ಕಾರಣದಿಂದಾಗಿ ತೊಂದರೆಗೆ ಸಿಲುಕಿರುವ ಉದ್ದಿಮೆಗಳಿಗೆ ಕಾರ್ಯಾಚರಣೆ ಬಂಡವಾಳವನ್ನು ಒದಗಿಸಲು ಯೋಜನೆಯು ನೆರವಾಗಲಿದೆ.

ಯೋಜನೆಯು ಹೆಚ್ಚುವರಿಯಾಗಿ ₹2.55 ಲಕ್ಷ ಕೋಟಿ ಮೊತ್ತದ ಸಾಲ ನೀಡಲು ನೆರವಾಗಲಿದೆ. ಸಂಪುಟದ ತೀರ್ಮಾನ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ಒದಗಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ‘ಎಂಎಸ್ಎಂಇ ಹಾಗೂ ವಿಮಾನಯಾನ ಉದ್ದಿಮೆಗಳಿಗೆ ಕೂಡ ಇದರಿಂದಾಗಿ ನೆರವು ಸಿಗುತ್ತದೆ’ ಎಂದು ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಸೃಷ್ಟಿಯಾಗಿರುವ ಸವಾಲುಗಳನ್ನು ಎದುರಿಸಲು ಈ ಯೋಜನೆಯು ಉದ್ದಿಮೆಗಳಿಗೆ ನೆರವು ಒದಗಿಸುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.

‘ಯೋಜನೆಯು ಉದ್ದಿಮೆಗಳಿಗೆತಮ್ಮ ವಹಿವಾಟನ್ನು ಉಳಿಸಿಕೊಳ್ಳಲುನೆರವಾಗುತ್ತದೆ, ಉದ್ಯೋಗಾವಕಾಶಗಳನ್ನು ಉಳಿಸುತ್ತದೆ, ಪೂರೈಕೆ ವ್ಯವಸ್ಥೆಯನ್ನು ರಕ್ಷಿಸುತ್ತದೆ ಎಂಬ ನಿರೀಕ್ಷೆ ಇದೆ. ಉದ್ದಿಮೆಗಳಿಗೆ, ಅದರಲ್ಲೂ ಮುಖ್ಯವಾಗಿ ಎಂಎಸ್ಎಂಇ ವಲಯ ಹಾಗೂ ವಿಮಾನಯಾನ ಕಂಪನಿಗಳಿಗೆ ಬೇಕಿರುವ ಹೆಚ್ಚುವರಿ ಕಾರ್ಯಾಚರಣೆ ಬಂಡವಾಳವು ಬ್ಯಾಂಕುಗಳು ಮತ್ತುಹಣಕಾಸು ಸಂಸ್ಥೆಗಳಿಂದ ಲಭ್ಯವಾಗುವಂತೆ ಮಾಡುವಲ್ಲಿ ಈ ಯೋಜನೆಯು ಬಹಳ ದೊಡ್ಡ ಹೆಜ್ಜೆಯಾಗಿರಲಿದೆ’ ಎಂದು ಕೂಡ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಅಗತ್ಯ ಸಮಯದಲ್ಲಿ ನಗದು ಲಭ್ಯತೆಯನ್ನು ಖಾತರಿಪಡಿಸುವ ಮೂಲಕ ಈ ಯೋಜನೆಯು ಉದ್ದಿಮೆಗಳನ್ನು ಉಳಿಸಲಿದೆ ಹಾಗೂ ಉದ್ಯೋಗನಷ್ಟವನ್ನು ತಪ್ಪಿಸಲಿದೆ. ದೇಶಿ ಉತ್ಪಾದನೆಯು ಅಡೆತಡೆಗಳು ಇಲ್ಲದಂತೆ ನಡೆಯಲು ಸಹಾಯ ಮಾಡಲಿದೆ ಎಂದು ಸರ್ಕಾರ ಹೇಳಿದೆ.

ಎಂಎಸ್ಎಂಇ ವಲಯದ ಉದ್ದಿಮೆಗಳು ಹಾಗೂ ವಿಮಾನಯಾನ ಕಂಪನಿಗಳು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಕಾರಣದಿಂದಾಗಿ ಗಣನೀಯ ಪ್ರಮಾಣದ ಹಣಕಾಸಿನ ಸಮಸ್ಯೆ ಎದುರಿಸುತ್ತಿವೆ.

ಈ ಯೋಜನೆಯು ಎಂಎಸ್ಎಂಇ ವಲಯದ ಉದ್ದಿಮೆಗಳ ಶೇ 100ರಷ್ಟು ಸಾಲದ ಅಗತ್ಯಕ್ಕೆ ಖಾತರಿ ಒದಗಿಸಲಿದೆ. ಎಂಎಸ್ಎಂಇ ಅಲ್ಲದ ಉದ್ದಿಮೆಗಳ ಸಾಲದ ಶೇ 90ರಷ್ಟಕ್ಕೆ ಖಾತರಿ ಒದಗಿಸಲಿದೆ. ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿಯು ಸಾಲದಾತ ಕಂಪನಿಗಳಿಗೆ ಖಾತರಿ ಒದಗಿಸುವ ಕೆಲಸ ಮಾಡಲಿದೆ ಎಂದು ಪ್ರಕಟಣೆಯು ಹೇಳಿದೆ.

ವಿಮಾನಯಾನ ವಲಯದ ಕಂಪನಿಗಳಿಗೆ ಸಾಲ ಖಾತರಿಯ ಅವಧಿಯು ಸಾಲದ ಮೊದಲ ವಿತರಣೆಯಿಂದ ಏಳು ವರ್ಷಗಳವರೆಗೆ ಚಾಲ್ತಿಯಲ್ಲಿ ಇರಲಿದೆ. ಎಂಎಸ್ಎಂಇ ಮತ್ತು ಎಂಎಸ್ಎಂಇ ಅಲ್ಲದ ಉದ್ದಿಮೆಗಳಿಗೆ ಇದು ಐದು ವರ್ಷಗಳ ಅವಧಿಯದ್ದಾಗಿರಲಿದೆ.

ಕೊರೊನಾ ವೈರಾಣುವಿನ ಕಾರಣದಿಂದಾಗಿ ಉಂಟಾಗಿದ್ದ ಸಾಂಕ್ರಾಮಿಕದ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಉದ್ದಿಮೆಗಳಿಗೆ ನೆರವು ನೀಡುವ ಉದ್ದೇಶದಿಂದ ಸಾಲ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರವು 2020ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಆರಂಭಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-1874738805

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.