ದೇಶದ ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಎಂಟಿಎಆರ್ ಟೆಕ್ನಾಲಜೀಸ್ ಷೇರಿನ ಬೆಲೆ ₹4,810ಕ್ಕೆ ತಲುಪಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ಕಂಪನಿಯು ರಕ್ಷಣೆ, ವೈಮಾಂತರಿಕ್ಷ, ಅಣು ವಿದ್ಯುತ್ ಮತ್ತು ಶುದ್ಧ ಇಂಧನ ವಲಯದ ಕಂಪನಿಗಳಿಗೆ ಸೇವೆ ಒದಗಿಸುತ್ತದೆ. ಅಲ್ಲದೆ, ಕಂಪನಿಯು ಬ್ಲೂಮ್ ಎನರ್ಜಿ ಜೊತೆ ದಶಕದ ಪಾಲುದಾರಿಕೆ ಹೊಂದಿದೆ.

ಎಂಟಿಎಆರ್ ಟೆಕ್ನಾಲಜೀಸ್, ಜಾಗತಿಕವಾಗಿ ಕೃತಕ ಬುದ್ಧಿಮತ್ತೆ ಆಧಾರಿತ ದತ್ತಾಂಶ ಕೇಂದ್ರ ವಿಸ್ತರಣೆಯ ಪರೋಕ್ಷ ಫಲಾನುಭವಿಯಾಗಿ ಹೊರಹೊಮ್ಮುತ್ತಿದೆ. 2026–30ರ ಅವಧಿಯಲ್ಲಿ ಈ ವಲಯದ ದತ್ತಾಂಶ ಕೇಂದ್ರಗಳ ಒಟ್ಟು ಸಾಮರ್ಥ್ಯವು ಅಂದಾಜು 100 ಗಿಗಾವಾಟ್ ಆಗುವ ನಿರೀಕ್ಷೆ ಇದೆ.

ಬ್ಲೂಮ್ ಎನರ್ಜಿ ಕಂಪನಿ ಪ್ರಮುಖ ವಸ್ತುಗಳ ಏಕೈಕ ಪೂರೈಕೆದಾರ ಎಂಟಿಎಆರ್ ಟೆಕ್ನಾಲಜೀಸ್. ಬ್ಲೂಮ್ ಎನರ್ಜಿಗೆ ಹೆಚ್ಚುತ್ತಿರುವ ಕಾರ್ಯಾದೇಶಗಳಿಂದಾಗಿ, ಎಂಟಿಎಆರ್ ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ₹2,700 ಕೋಟಿಯಿಂದ ₹5,300 ಕೋಟಿವರೆಗೆ ವರಮಾನ ಪಡೆದುಕೊಳ್ಳುವ ನಿರೀಕ್ಷೆ ಇದೆ.

2024–25ರಿಂದ 2027–28ರಲ್ಲಿ ಕಂಪನಿಯ ವರಮಾನದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು (ಸಿಎಜಿಆರ್) ಶೇ 40ರಷ್ಟು ಮತ್ತು ತೆರಿಗೆ ನಂತರದ ಲಾಭ ಶೇ 78ರಷ್ಟು ಇರುವ ನಿರೀಕ್ಷೆ ಇದೆ. ತೆರಿಗೆ, ಬಡ್ಡಿ, ಸಾಲ ತೀರುವಳಿ ಪೂರ್ವದ ವರಮಾನ (ಇಬಿಐಟಿಡಿಎ) ಶೇ 55ರಷ್ಟಿರಲಿದೆ ಎಂದು ಹೇಳಿದೆ.

ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಕಂಪನಿಯ ಷೇರಿನ ಬೆಲೆ ₹3,514 ಆಗಿತ್ತು.

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.