ಗುರುವಾರ , ಮಾರ್ಚ್ 30, 2023
22 °C

ಮುಕೇಶ್‌ ಅಂಬಾನಿ ಕುಟುಂಬ ಲಂಡನ್‌ನಲ್ಲಿ ವಾಸಿಸಲಿದೆ ಎಂಬ ವರದಿ ಅಲ್ಲಗಳೆದ ರಿಲಯನ್ಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬವು ಇನ್ನು ಮುಂದೆ ಲಂಡನ್‌ನ ಸ್ಟೋಕ್‌ ಪಾರ್ಕ್‌ನಲ್ಲಿ ಭಾಗಶಃ ನೆಲೆಸಲಿದೆ ಎಂಬ ವರದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರ ಅಲ್ಲಗಳೆದಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಲಂಡನ್‌ನ ಬಕಿಂಗ್‌ಹ್ಯಾಮ್‌ಶೈರ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ ಅನ್ನು ಖರೀದಿಸಿದ್ದು, ಅಂಬಾನಿ ಕುಟುಂಬವು ಭಾಗಶಃ ಅಲ್ಲಿ ನೆಲೆಸಲಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಸಾಮಾಜಿಕ ಮಾಧ್ಯಮಗಳಲ್ಲೂ ಈ ಕುರಿತು ಸಂದೇಶಗಳು ಹರಿದಾಡಿದ್ದವು. ಈ ವಿಚಾರವಾಗಿ ಕಂಪನಿಯು ಸ್ಪಷ್ಟನೆ ನೀಡಿ ಪ್ರಕಟಣೆ ಬಿಡುಗಡೆ ಮಾಡಿದೆ.

ಓದಿ: 

‘ರಿಲಯನ್ಸ್ ಸಮೂಹ ಸಂಸ್ಥೆಯು ಸ್ಟೋಕ್‌ ಪಾರ್ಕ್‌ ಎಸ್ಟೇಟನ್ನು ಇತ್ತೀಚೆಗೆ ಖರೀದಿಸಿದ್ದು ನಿಜ. ಇದನ್ನು ಸ್ಥಳೀಯ ಯೋಜನಾ ಮಾರ್ಗಸೂಚಿ, ನಿಯಂತ್ರಣಗಳಿಗೆ ಒಳಪಟ್ಟು ಗಾಲ್ಫಿಂಗ್ ಹಾಗೂ ಕ್ರೀಡಾ ರೆಸಾರ್ಟ್‌ ಆಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಖರೀದಿಸಲಾಗಿದೆ. ಈ ಸ್ವಾಧೀನವು ರಿಲಯನ್ಸ್ ಸಮೂಹದ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದೆ. ಇದು ಭಾರತದ ಆತಿಥ್ಯ ಉದ್ಯಮದ ಹೆಜ್ಜೆಗುರುತನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು