ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 5 ವರ್ಷ ಮುಕೇಶ್‌ ಅಂಬಾನಿ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ

Last Updated 7 ಜುಲೈ 2018, 14:03 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಕೇಶ್‌ ಅಂಬಾನಿ ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ಮತ್ತೊಂದು ಅವಧಿಗೆ ಮುಂದುವರಿಸಲು ಷೇರುದಾರರು ಒಪ್ಪಿಗೆ ನೀಡಿದ್ದಾರೆ.

ಅಂಬಾನಿ ಅವರ ಸದ್ಯದ ಅಧಿಕಾರಾವಧಿ 2019ರ ಏಪ್ರಿಲ್‌ 19ರಂದು ಅಂತ್ಯವಾಗಲಿದೆ.ಜುಲೈ 5 ರಂದು ನಡೆದಿದ್ದ ವಾರ್ಷಿಕ ಸಭೆಯಲ್ಲಿ ಐದು ವರ್ಷಗಳ ಅವಧಿಗೆ ಮರು ನೇಮಕ ಮಾಡಲು ವಿಶೇಷ ಗೊತ್ತುವಳಿ ಮಂಡಿಸಲಾಗಿತ್ತು. 616.45 ಕೋಟಿ ಷೇರುದಾರರಲ್ಲಿ 508.18 ಕೋಟಿ ಷೇರುದಾರರು ಅಂಬಾನಿ ಅವರ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಮರು ನೇಮಕವಾದ ಬಳಿಕ ₹ 4.17 ಕೋಟಿವಾರ್ಷಿಕ ವೇತನ ಹಾಗೂ₹ 59 ಲಕ್ಷ ಮೊತ್ತದ ಇತರೆ ಭತ್ಯೆಗಳನ್ನು ‌ಪಡೆಯಲಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಆಡಳಿತ ಮಂಡಳಿಯಲ್ಲಿದ್ದ ಮುಕೇಶ್‌ ಅವರು, ತಂದೆ ಧೀರೂಭಾಯಿ ಅಂಬಾನಿ ಅವರ ಮರಣದ ನಂತರ 2002ರ ಜುಲೈನಲ್ಲಿ ಅಧ್ಯಕ್ಷ ಹುದ್ದೆಗೇರಿದರು.

2018–19ರಲ್ಲಿಪರಿವರ್ತಿಸಲಾಗದ ಸಾಲಪತ್ರಗಳ (ಎನ್‌ಸಿಡಿ) ವಿತರಣೆ ಮೂಲಕ ₹ 20 ಸಾವಿರ ಕೋಟಿ ಸಂಗ್ರಹಿಸಲು ಸಹ ಷೇರುದಾರರು ಒಪ್ಪಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT