ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ನಲ್ಲಿ ನಾಯಕತ್ವ ಬದಲಾವಣೆ?

Last Updated 28 ಡಿಸೆಂಬರ್ 2021, 19:05 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಕಂಪನಿಯ ನಾಯಕತ್ವದಲ್ಲಿ ಬದಲಾವಣೆಗಳು ಆಗುವ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನೂ ಸೇರಿದಂತೆ ಕಂಪನಿಯ ಹಿರಿಯರು ಯುವ ತಲೆಮಾರಿಗೆ ದಾರಿ ಮಾಡಿಕೊಡುವ ಮೂಲಕ ಈ ಬದಲಾವಣೆ ಆಗಬೇಕಿದೆ ಎಂದು ಹೇಳಿದ್ದಾರೆ.

‘ರಿಲಯನ್ಸ್ ಕಂಪನಿಯು ಈಗ ಮಹತ್ವಪೂರ್ಣವಾದ ನಾಯಕತ್ವ ಬದಲಾವಣೆಯನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಇದೆ’ ಎಂದು ಹೇಳಿದ್ದಾರೆ. ಆಕಾಶ್ ಮತ್ತು ಅನಂತ್ ಅವರು ಅಂಬಾನಿ ಅವರ ಪುತ್ರರು, ಇಶಾ ಅವರು ಅಂಬಾನಿ ಅವರ ಪುತ್ರಿ.

‘ನನ್ನನ್ನೂ ಸೇರಿದಂತೆ ಎಲ್ಲ ಹಿರಿಯರು ಹೆಚ್ಚು ಸ್ಪರ್ಧಾತ್ಮಕ ಆಗಿರುವ, ಬಹಳ ಬದ್ಧತೆಯನ್ನು ಹೊಂದಿರುವ ಮತ್ತು ವಿಶ್ವಾಸ ಮೂಡಿಸುವಂತಹ ಯುವ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕು. ನಾವು ಅವರಿಗೆ ಮಾರ್ಗದರ್ಶನ ನೀಡಬೇಕು. ಪ್ರೋತ್ಸಾಹ ನೀಡಬೇಕು ಮತ್ತು ಅವರನ್ನು ಸಶಕ್ತರನ್ನಾಗಿಸಬೇಕು. ಅವರು ನಮಗಿಂತ ಚೆನ್ನಾಗಿ ಕೆಲಸ ಮಾಡಿದಾಗ ಬೆನ್ನುತಟ್ಟಬೇಕು‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT