ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ಕ್ಕೆ ಮೊದಲ ಇ.ವಿ. ಮಾದರಿ: ಮಾರುತಿ ಸಿಇಒ

ಇ.ವಿ. ಮಾರುಕಟ್ಟೆಯಲ್ಲಿ ಮೊದಲ ಸ್ಥಾನಕ್ಕೇರುವ ಗುರಿ
Last Updated 17 ಏಪ್ರಿಲ್ 2022, 12:45 IST
ಅಕ್ಷರ ಗಾತ್ರ

ನವದೆಹಲಿ: ಮಾರುತಿ ಸುಜುಕಿ ಕಂಪನಿಯು ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ಹಲವು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ಆ ಮೂಲಕ ದೇಶದಲ್ಲಿ ಇ.ವಿ. ಮಾರುಕಟ್ಟೆಯಲ್ಲಿ ಮೊದಲ ಸ್ಥಾನಕ್ಕೆ ಬರುವ ಯೋಜನೆ ಹೊಂದಿದೆ ಎಂದು ಕಂಪನಿಯ ಹೊಸ ಸಿಇಒ ಹಿಸಾಶಿ ಟೇಕುಚಿ ತಿಳಿಸಿದ್ದಾರೆ.

ಕಂಪನಿಯು ಸದ್ಯ ವಿದ್ಯುತ್ ಚಾಲಿತ ವಾಹನ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಇಲ್ಲ. ಹೀಗಿದ್ದರೂ ಹಲವು ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ನಂಬರ್‌ 1 ಸ್ಥಾನಕ್ಕೆ ಏರಲಿದೆ ಎಂದು ಅವರು ಹೇಳಿದ್ದಾರೆ.

ಕಂಪನಿಯು 2025ರಲ್ಲಿ ತನ್ನ ಮೊದಲ ಇ.ವಿ. ಮಾದರಿ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಸ್ಥಳೀಯ ಘಟಕಗಳಲ್ಲಿಯೇ ತಯಾರಿಕೆ ಆರಂಭಿಸುವ ಯೋಜನೆಯನ್ನೂ ಹೊಂದಿದೆ. ಮೊದಲ ವಿದ್ಯುತ್ ಚಾಲಿತ ವಾಹನವನ್ನು ಸುಜುಕಿ ಮೋಟರ್‌ನ ಗುಜರಾತ್ ಘಟಕದಿಂದ ಹೊರತರಲಾಗುವುದು ಎಂದು ತಿಳಿಸಿದ್ದಾರೆ.

‘ನಮ್ಮ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಭಾರತದ ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ವಾಹನ ಪರಿಚಯಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಆದರೆ, ಮಾರುಕಟ್ಟೆ ಬೇಡಿಕೆಯು ಈಗಲೂ ಸೀಮಿತವಾಗಿದೆ. ಮಾರಾಟ ಸಹ ಅತ್ಯಂತ ಕಡಿಮೆ ಇದೆ’ ಎಂದಿದ್ದಾರೆ.

‘ಇ.ವಿ. ಕುರಿತಾಗಿ ನಾವು ಏನನ್ನೂ ಮಾಡಿಲ್ಲ ಎಂದಲ್ಲ. ನಮ್ಮ ಹಾಲಿ ಮಾದರಿಗಳಲ್ಲಿ ಬ್ಯಾಟರಿ ಮತ್ತು ಮೋಟರ್‌ ಅಳವಡಿಸಿ ಪರೀಕ್ಷೆ ನಡೆಸಲಾಗುತ್ತಿದೆ.ಭಾರತದ ಪರಿಸ್ಥಿತಿಗೆ ಸರಿಹೊಂದುವಂತಹ ಇ.ವಿ. ಸಿದ್ಧಪಡಿಸುವುದು ಬಹಳ ಕಷ್ಟ. ಹೀಗಾಗಿ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಈ ಕುರಿತು ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT