ಮುಂಬೈ: ನಗರದ ಹೆಗ್ಗುರುತು ಗಳಲ್ಲಿ ಒಂದಾಗಿರುವ, ‘ಏರ್ ಇಂಡಿಯಾ’ದ ಐತಿಹಾಸಿಕ ಬಹುಮಹಡಿ ಕಟ್ಟಡವನ್ನು ಮಹಾರಾಷ್ಟ್ರ ಸರ್ಕಾರವು ಬುಧವಾರ ಒಟ್ಟು ₹1,601 ಕೋಟಿ ಮೊತ್ತಕ್ಕೆ ಖರೀದಿಸಿದೆ.

ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಕಂಪನಿ (ಎಐಎಎಚ್ಎಲ್) ಮತ್ತು ರಾಜ್ಯದ ಲೋಕೋಪಯೋಗಿ ಇಲಾಖೆ ನಡುವೆ ಕಟ್ಟಡದ ಮಾಲೀಕತ್ವ ವರ್ಗಾವಣೆಯ ದಾಖಲೆಗಳ ವಿನಿಮಯವು ಸಚಿವಾಲಯದ ಕಟ್ಟಡ ದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಉಪಸ್ಥಿತಿಯಲ್ಲಿ ಬುಧವಾರ ನಡೆಯಿತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ದಕ್ಷಿಣ ಮುಂಬೈನ ನರಿಮನ್ ಪಾಯಿಂಟ್ನಲ್ಲಿ ಇರುವ, ಸಮುದ್ರ ಮುಖಿಯಾಗಿರುವ 23 ಅಂತಸ್ತುಗಳ ಈ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿದೆ. ಇದು, ಆರಂಭದ ವರ್ಷಗಳಲ್ಲಿ ಜನಾಕರ್ಷಣೆಯ ಕೇಂದ್ರವೂ ಆಗಿತ್ತು. ಖಾಸಗೀಕರಣದ ಬಳಿಕ ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸಮೂಹ ಸಂಸ್ಥೆಯು ತನ್ನ ಸ್ವಾಧೀನಕ್ಕೆ ಪಡೆದಿತ್ತು. ಅದರ ನಂತರ ಈ ಕಟ್ಟಡದ ಮಾಲೀಕತ್ವವು ಎಐಎಎಚ್ಎಲ್ ಬಳಿಯೇ ಉಳಿದಿತ್ತು.

ದಕ್ಷಿಣ ಮುಂಬೈ ವಲಯದಲ್ಲಿ ಸರ್ಕಾರಿ ಕಚೇರಿಗಳಿಗಾಗಿ ಸ್ಥಳಾವಕಾಶದ ಕೊರತೆ ಎದುರಿಸುತ್ತಿರುವ ಮಹಾರಾಷ್ಟ್ರ ಸರ್ಕಾರವು ಈ ಕಟ್ಟಡವನ್ನು ಸ್ವಾಧೀನಕ್ಕೆ ಪಡೆಯುವ ಕುರಿತು 2021ರಿಂದಲೂ ಮಾತುಕತೆಯನ್ನು ನಡೆಸುತ್ತಿತ್ತು.

₹1,601 ಕೋಟಿಗೆ ಸ್ವಾಧೀನಕ್ಕೆ ಪಡೆಯಲು 2023ರಲ್ಲಿ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಒಪ್ಪಂದದ ಭಾಗವಾಗಿ ಎಐಎಎಚ್ಎಲ್ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿದ್ದ ₹298 ಕೋಟಿಯನ್ನು ಮನ್ನಾ ಮಾಡಲು ಸಮ್ಮತಿಸಿತ್ತು. ಆಸ್ತಿ ವರ್ಗಾವಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರವು 2024ರ ಮಾರ್ಚ್ನಲ್ಲಿ ಅಂತಿಮ ಅನುಮೋದನೆ ನೀಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1976297116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.