ಭಟ್ಕಳ: ‘ಬೆಳ್ಕೆ ಸಹಕಾರ ಸಂಘ ಈಗಾಗಲೇ ಬೆಳಕೆಯ ಪ್ರಧಾನ ಕಚೇರಿಯಲ್ಲಿ ಮುಖ್ಯಶಾಖೆ, ಶಿರೂರು ಮತ್ತು ಸರ್ಪನಕಟ್ಟೆಯಲ್ಲಿ ಶಾಖೆ ಹೊಂದಿದೆ. ಇದೀಗ ಮುರುಡೇಶ್ವರದಲ್ಲಿ ಸಂಘದ 4ನೇ ಶಾಖೆ ವಿಸ್ತರಿಸುತ್ತಿದ್ದೇವೆ. ನಮ್ಮ ಸಂಘ ಎಲ್ಲರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ ಮಾದೇವ ಜಿ. ನಾಯ್ಕ ಹೇಳಿದರು.

ಮುರುಡೇಶ್ವರದ ಬಸ್ ನಿಲ್ದಾಣದ ಎದುರಿನ ಕಟ್ಟಡದಲ್ಲಿ ಬುಧವಾರ ಬೆಳ್ಕೆ ಗ್ರಾಮೀಣ ವ್ಯವಸಾಯ ಸಹಕಾರ ಸಂಘದ 4ನೇ ಶಾಖೆ ಉದ್ಘಾಟಿಸಿ ಮಾತನಾಡಿದರು

ಉದ್ಘಾಟನೆಯ ಪೂರ್ವದಲ್ಲಿ ಶಾಖೆಯಲ್ಲಿ ಗಣಹೋಮ ಮತ್ತು ಲಕ್ಷ್ಮಿ ಪೂಜೆ ನಡೆಸಲಾಯಿತು. ಉಪಾಧ್ಯಕ್ಷ ಪಾಂಡು ಜಿ. ನಾಯ್ಕ, ನಿರ್ದೇಶಕರಾರ ಲಕ್ಷ್ಮೀನಾರಾಯಣ ನಾಯ್ಕ, ನಾಗೇಶ ನಾಯ್ಕ, ಲೋಕೇಶ ನಾಯ್ಕ, ದಾಮೋದರ ನಾಯ್ಕ, ರವಿರಾಜ ಜೈನ್, ಮಂಜು ಮೊಗೇರ, ಭಾಸ್ಕರ ಗೊಂಡ, ಲಲಿತಾ ಕೊರ್ಗ ನಾಯ್ಕ, ಶಾರದಾ ಚಂದ್ರ ನಾಯ್ಕ, ಭಾರತೀ ರವಿ ನಾಯ್ಕ,ಪ್ರಧಾನ ವ್ಯವಸ್ಥಾಪಕ ಅಣ್ಣಪ್ಪ ಎನ್ ನಾಯ್ಕ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಗಣೇಶ ಗೌಡ, ಭಟ್ಕಳ ಪಿಎಲ್ಡಿ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ವಾಸುದೇವ ನಾಯ್ಕ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಂತೋಷ ನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-20-1889517948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.