‘ಎಂಎಫ್‌’ ಸಂಪತ್ತು ವೃದ್ಧಿ

7

‘ಎಂಎಫ್‌’ ಸಂಪತ್ತು ವೃದ್ಧಿ

Published:
Updated:

ನವದೆಹಲಿ: ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ನಿರ್ವಹಣಾ ಸಂಪತ್ತು 2018ರಲ್ಲಿ ₹ 1.24 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಇದರಿಂದ ಒಟ್ಟಾರೆ ಸಂಪತ್ತಿನ ಮೌಲ್ಯ ಡಿಸೆಂಬರ್‌ ಅಂತ್ಯಕ್ಕೆ ₹ 23.61 ಲಕ್ಷ ಕೋಟಿಗೆ ತಲುಪಿದೆ.

ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಮತ್ತು ಚಿಲ್ಲರೆ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯಿಂದ ಸಂಸ್ಥೆಗಳ ಸಂಪತ್ತು ವೃದ್ಧಿಯಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ಸತತ ಆರನೇ ವರ್ಷದಲ್ಲಿಯೂ ನಿರ್ವಹಣಾ ಸಂಪತ್ತು ಏರಿಕೆ ಕಂಡಿದೆ. ಕಚ್ಚಾ ತೈಲ ದರದ ಏರಿಳಿತ, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಇಳಿಕೆ ಹಾಗೂ ಷೇರುಪೇಟೆಯ ಚಂಚಲ ವಹಿವಾಟಿನ ಹೊರತಾಗಿಯೂ ಚಿಲ್ಲರೆ ಹೂಡಿಕೆದಾರರ ‘ಸಿಪ್‌’ ಹೂಡಿಕೆಯಲ್ಲಿ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !