ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಮೆಥೋಡಿಸ್ಟ್ ಕ್ರೈಸ್ತ ಜಾತ್ರೆ

Last Updated 29 ಮೇ 2018, 11:06 IST
ಅಕ್ಷರ ಗಾತ್ರ

ಬೀದರ್: ಸೇಂಟ್ ಪೌಲ್ ಮೆಥೋಡಿಸ್ಟ್ ಕೇಂದ್ರ ಸಭೆ ವತಿಯಿಂದ ನಗರದಲ್ಲಿ ಜಿಲ್ಲಾ ಮೆಥೋಡಿಸ್ಟ್ ಕ್ರೈಸ್ತ 96ನೆಯ ವಾರ್ಷಿಕ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.

ಜಾತ್ರೆ ಪ್ರಯುಕ್ತ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಸುವಾರ್ತೆ ಕೂಟಗಳು, ಭಜನೆ ಸ್ಪರ್ಧೆ, ಆಟೋಟ, ಚಲನಚಿತ್ರ ಪ್ರದರ್ಶನ ನಡೆದವು. ಮರ್ಜಾಪುರ ಗವಿಯಲ್ಲಿ ಸೂರ್ಯೋದಯ ಆರಾಧನೆ ಜರುಗಿತು.

ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕ್ರೈಸ್ತರು ಜಾತ್ರೆಯಲ್ಲಿ ಪಾಲ್ಗೊಂಡರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆ ಭಕ್ತಿಯಿಂದ ಭಾಗಿಯಾದರು.

ಜಾತ್ರೆಯಲ್ಲಿ ಹತ್ತಾರು ತಾತ್ಕಾಲಿಕ ಅಂಗಡಿಗಳು ತೆರೆದುಕೊಂಡಿದ್ದವು. ಬಗೆ ಬಗೆಯ ಜೋಕಾಲಿಗಳು, ಜಲಕ್ರೀಡೆ ಆಟಿಕೆಗಳು ಗಮನ ಸೆಳೆದವು. ತಿಂಡಿ ತಿನಿಸುಗಳ ಅಂಗಡಿಗಳನ್ನು ತೆರೆಯಲಾಗಿತ್ತು. ಮಕ್ಕಳು ಆಟಿಕೆಗಳನ್ನು ಖರೀದಿಸಿ ಸಂಭ್ರಮಿಸಿದರು.

ಜಾತ್ರೆಯ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿತ್ತು. ಕುಡಿಯುವ ನೀರು, ಶಾಂತಿ ಮತ್ತು ಶಿಸ್ತು ಪಾಲನೆ, ಆಟೊ, ಪ್ರಚಾರ, ವೈದ್ಯಕೀಯ ನೆರವು ಸೇರಿದಂತೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿತ್ತು. ಆಯಾ ಸಮಿತಿಗಳ ಪದಾಧಿಕಾರಿಗಳು ವಹಿಸಿಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಜಾತ್ರೆ ಯಶಸ್ಸಿಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT