ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್ ಫಂಡ್‌ ಸಂಪತ್ತು ಇಳಿಕೆ

Last Updated 9 ಮಾರ್ಚ್ 2019, 17:04 IST
ಅಕ್ಷರ ಗಾತ್ರ

ಮುಂಬೈ: ದೇಶದ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ನಿರ್ವಹಣೆಯಲ್ಲಿರುವ ಸಂಪತ್ತು ಮೌಲ್ಯ 2019ರ ಫೆಬ್ರುವರಿಯಲ್ಲಿ ಶೇ 0.89ರಷ್ಟು ಇಳಿಕೆಯಾಗಿದ್ದು, ₹ 23.16 ಲಕ್ಷ ಕೋಟಿಗೆ ತಲುಪಿದೆ.

ಜನವರಿಯಲ್ಲಿ ಸಂಪತ್ತು ಮೌಲ್ಯ₹ 23.40 ಲಕ್ಷ ಕೋಟಿಗಳಷ್ಟಿತ್ತು. ಆದಾಯ ಮತ್ತು ಲಿಕ್ವಿಡ್‌ ಫಂಡ್‌ಗಳಿಂದ ಬಂಡವಾಳ ಹೊರಹರಿವು ಹೆಚ್ಚಾಗಿದೆ. ಹೀಗಾಗಿ ನಿರ್ವಹಣಾ ಸಂಪತ್ತು ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ.

ಷೇರು ಸಂಬಂಧಿತ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಶೇ 68ರಷ್ಟು ಇಳಿಕೆಯಾಗಿದ್ದು, ₹ 5,122 ಕೋಟಿಗೆ ತಲುಪಿದೆಎಂದು ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.

2018ರ ಫೆಬ್ರುವರಿಯಲ್ಲಿ ಷೇರು ಸಂಬಂಧಿ ಮ್ಯೂಚುವಲ್ ಫಂಡ್‌ಗಳಲ್ಲಿ ₹ 16,268 ಕೋಟಿ ಹೂಡಿಕೆಯಾಗಿತ್ತು. 2018ರ ಅಕ್ಟೋಬರ್‌ನಿಂದಲೂ ಹೂಡಿಕೆಯಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಹೇಳಿದೆ.

ವಿದೇಶಿ ವಿನಿಮಯಸಂಗ್ರಹ ಹೆಚ್ಚಳ

ಮುಂಬೈ: ದೇಶದವಿದೇಶಿವಿನಿಮಯ ಮೀಸಲು ಸಂಗ್ರಹ ಮಾರ್ಚ್‌ 1ಕ್ಕೆ ಕೊನೆಗೊಂಡ ವಾರದಲ್ಲಿ ₹ 18,130 ಕೋಟಿಗಳಷ್ಟು ಹೆಚ್ಚಾಗಿ ಮತ್ತೊಮ್ಮೆ ₹ 28 ಲಕ್ಷ ಕೋಟಿಯ ಗಡಿ ತಲುಪಿದೆ.

ಅದಕ್ಕೂ ಹಿಂದಿನ ವಾರ ₹ 28.12 ಲಕ್ಷ ಕೋಟಿಗೆ ತಲುಪಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿದೆ.2018ರ ಏಪ್ರಿಲ್ 13ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ₹ 29.82 ಲಕ್ಷ ಕೋಟಿಗಳಿಗೆ ತಲುಪಿತ್ತು. ಆ ಬಳಿಕ ಇಳಿಮುಖವಾಗಿದ್ದು, ₹ 1.75 ಲಕ್ಷ ಕೋಟಿಗಳಷ್ಟು ಇಳಿಕೆ ಕಂಡಿದೆ.

ಚಿನ್ನದ ಮೀಸಲು ಸಂಗ್ರಹ ₹ 341 ಕೋಟಿ ಹೆಚ್ಚಾಗಿ ₹ 1.62 ಲಕ್ಷ ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT