ಮಂಗಳವಾರ, ಮೇ 18, 2021
28 °C

ಮ್ಯೂಚುವಲ್ ಫಂಡ್ ಸಂಪತ್ತು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ನಿರ್ವಹಣೆಯಲ್ಲಿ ಇರುವ ಸಂಪತ್ತಿನ ಮೌಲ್ಯವು ಡಿಸೆಂಬರ್‌ ಅಂತ್ಯಕ್ಕೆ ಶೇ 2ರಷ್ಟು ಇಳಿಕೆಯಾಗಿದ್ದು ₹ 26.54 ಲಕ್ಷ ಕೋಟಿಗಳಷ್ಟಾಗಿದೆ.

ಸಾಲಪತ್ರಗಳನ್ನು ಆಧರಿಸಿದ ಯೋಜನೆಗಳಿಂದ ಡಿಸೆಂಬರ್‌ನಲ್ಲಿ ₹ 78,940 ಕೋಟಿ ಬಂಡವಾಳ ಹೊರ
ಹೋಗಿದೆ. ಇದರಿಂದಾಗಿ ನಿರ್ವಹಣಾ ಸಂಪತ್ತು ಇಳಿಕೆ ಕಂಡಿದೆ. 44 ಸಂಸ್ಥೆಗಳ ಒಟ್ಟಾರೆ ನಿರ್ವಹಣಾ ಸಂಪತ್ತು ನವೆಂಬರ್‌ ಅಂತ್ಯದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 27.04 ಲಕ್ಷ ಕೋಟಿಗಳಿಗೆ ತಲುಪಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟವುಸ (ಎಎಂಎಫ್‌ಐ) ಮಾಹಿತಿ ನೀಡಿದೆ.

ಷೇರುಪೇಟೆಯಲ್ಲಿನ ಸಕಾರಾತ್ಮಕ ವಹಿವಾಟಿನಿಂದ ಷೇರು ಆಧಾರಿತ ನಿಧಿಗಳು ಹೆಚ್ಚಿನ ಹೂಡಿಕೆ ಆಕರ್ಷಿಸಿವೆ. ನವೆಂಬರ್‌ನಲ್ಲಿ ₹ 933 ಕೋಟಿ, ಡಿಸೆಂಬರ್‌ನಲ್ಲಿ ₹ 4,432 ಕೋಟಿ ಹೂಡಿಕೆಯಾಗಿದೆ. ‘ಸಣ್ಣ ಮತ್ತು ಮಧ್ಯಮ ಶ್ರೇಣಿ ಸೂಚ್ಯಂಕಗಳು ಇಳಿಮುಖವಾಗಿವೆ. ಹೀಗಾಗಿ ದೊಡ್ಡ ಶ್ರೇಣಿಯ ಸೂಚ್ಯಂಕಗಳಲ್ಲಿ ಹೂಡಿಕೆ ಹೆಚ್ಚುತ್ತಿದೆ. ಷೇರು ನಿಧಿಗಳಲ್ಲಿ ಇದು ಅತಿ ಹೆಚ್ಚು ಬಂಡವಾಳ ಆಕರ್ಷಿಸಲಿದೆ’ ಎಂದು ಪೈಸಾಬಜಾರ್ ಡಾಟ್‌ಕಾಂನ ಸಿಇಒ ನವೀನ್‌ ಕೆ. ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು