ಎಂಎಫ್ ಸಂಪತ್ತು ನಿರ್ವಹಣಾ ಮೊತ್ತ ಹೆಚ್ಚಳ

7

ಎಂಎಫ್ ಸಂಪತ್ತು ನಿರ್ವಹಣಾ ಮೊತ್ತ ಹೆಚ್ಚಳ

Published:
Updated:

ನವದೆಹಲಿ: ಮ್ಯೂಚುವಲ್‌ ಫಂಡ್‌ಗಳು ನಿರ್ವಹಿಸುವ ಸಂಪತ್ತಿನ ಮೊತ್ತವು ನವೆಂಬರ್‌ ತಿಂಗಳಾಂತ್ಯಕ್ಕೆ ₹ 24 ಲಕ್ಷ ಕೋಟಿ ದಾಟಿದೆ.

ಮ್ಯೂಚುವಲ್‌ ಫಂಡ್‌ ಉದ್ದಿಮೆಯ 42 ಸಂಸ್ಥೆಗಳು ನಿರ್ವಹಿಸುವ ಒಟ್ಟಾರೆ ಮೊತ್ತವು (ಎಯುಎಂ) ಅಕ್ಟೋಬರ್‌ನಲ್ಲಿ ₹ 22.23 ಲಕ್ಷ ಕೋಟಿಗಳಷ್ಟಿತ್ತು. ನವೆಂಬರ್‌ ತಿಂಗಳಾಂತ್ಯಕ್ಕೆ ಇದು ₹ 24.03 ಲಕ್ಷ ಕೋಟಿಗೆ ಏರಿಕೆಯಾಗಿರುವುದು ಭಾರತದ ಮ್ಯೂಚುವಲ್‌ ಫಂಡ್‌ಗಳ ಸಂಘ (ಎಎಂಎಫ್‌ಐ) ಬಿಡು
ಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಒಂದು ವರ್ಷದ ಹಿಂದಿನ ಈ ಅವಧಿಯಲ್ಲಿ ‘ಎಯುಎಂ’ ₹ 22.79 ಲಕ್ಷ ಕೋಟಿಗಳಷ್ಟಿತ್ತು. ಟ್ರೆಸರಿ ಬಿಲ್‌, ಸರ್ಕಾರಿ ಸಾಲಪತ್ರಗಳಲ್ಲಿ (ಲಿಕ್ವಿಡ್ ಫಂಡ್ಸ್‌), ಷೇರು ಮತ್ತು ಷೇರು ಸಂಬಂಧಿ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆ ಪ್ರಮಾಣ ಹೆಚ್ಚಳಗೊಂಡಿದೆ. ಲಿಕ್ವಿಡ್‌ ಫಂಡ್ಸ್‌ಗಳಲ್ಲಿ ₹ 1.36 ಲಕ್ಷ ಕೋಟಿ, ಷೇರುಗಳಲ್ಲಿ ₹ 8,400 ಕೋಟಿ ಮತ್ತು ಷೇರು ಸಂಬಂಧಿ ಉಳಿತಾಯ ಯೋಜನೆಗಳಲ್ಲಿ ₹ 215 ಕೋಟಿ ಹೂಡಿಕೆ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಹೂಡಿಕೆಯ ಹೊರಹರಿವು ಕಾಣುತ್ತಿದ್ದ ಚಿನ್ನದ ವಿನಿಮಯ ನಿಧಿಗಳಲ್ಲಿ ₹ 10 ಕೋಟಿ ಹೂಡಿಕೆಯಾಗಿದೆ. ವರಮಾನ ನಿಧಿಗ
ಳಿಂದ ₹ 6,518 ಕೋಟಿ ಹೊರ ಹೋಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !