ಶನಿವಾರ, ನವೆಂಬರ್ 23, 2019
18 °C

‘ಎಂಎಫ್‌’ ಸಂಪತ್ತು ವೃದ್ಧಿ

Published:
Updated:

ಮುಂಬೈ: ದೇಶದ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ನಿರ್ವಹಣಾ ಸಂಪತ್ತಿನ ಮೌಲ್ಯ 2019ರ ಆಗಸ್ಟ್‌ನಲ್ಲಿ ಶೇ 4ರಷ್ಟು ಹೆಚ್ಚಾಗಿದ್ದು ₹ 25.47 ಲಕ್ಷ ಕೋಟಿಗೆ ಏರಿಕೆಯಾಗಿದೆ.

2019ರ ಜುಲೈನಲ್ಲಿ ನಿರ್ವಹಣಾ ಸಂಪತ್ತಿನ ಮೌಲ್ಯ ₹ 24.53 ಲಕ್ಷ ಕೋಟಿಗಳಷ್ಟಿತ್ತು ಎಂದು ಕೇರ್ ರೇಟಿಂಗ್ಸ್‌ ಸಂಸ್ಥೆ ಮಾಹಿತಿ ನೀಡಿದೆ.

2019–20ನೇ ಹಣಕಾಸು ವರ್ಷದ ಮೊದಲ ಐದು ತಿಂಗಳಿನಲ್ಲಿ ಉದ್ಯಮದ ನಿರ್ವಹಣಾ ಸಂಪತ್ತು
₹ 1.68 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಎಂಎಫ್‌ ಉದ್ಯಮಕ್ಕೆ ಸಣ್ಣ ನಗರಗಳ ಕೊಡುಗೆಯು ಆಗಸ್ಟ್‌ನಲ್ಲಿ ಶೇ 15.3ರಷ್ಟಿದ್ದು, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಮತ್ತು ಕರ್ನಾಟಕ ನಂತರದ ಎರಡು ಸ್ಥಾನದಲ್ಲಿವೆ.

ಸಣ್ಣ ನಗರಗಳ ಕೊಡುಗೆ ಜುಲೈನಲ್ಲಿ ಶೇ 15.49ರಷ್ಟಿತ್ತು.

ಪ್ರತಿಕ್ರಿಯಿಸಿ (+)