ಮಿಂತ್ರಾ ಸಿಇಒ ಅನಂತ್‌ ರಾಜೀನಾಮೆ

7

ಮಿಂತ್ರಾ ಸಿಇಒ ಅನಂತ್‌ ರಾಜೀನಾಮೆ

Published:
Updated:
Prajavani

ನವದೆಹಲಿ: ಇ–ಕಾಮರ್ಸ್‌ ಫ್ಲಿಪ್‌ಕಾರ್ಟ್‌ನ ಅಂಗಸಂಸ್ಥೆಗಳಾಗಿರುವ ಮಿಂತ್ರಾ ಮತ್ತು ಜಬಾಂಗ್‌ನ ಸಿಇಒ ಅನಂತ್‌ ನಾರಾಯಣನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಫ್ಯಾಷನ್‌ ಇ–ಕಾಮರ್ಸ್‌ ಮಾರುಕಟ್ಟೆಯಲ್ಲಿ ಮೂರುವರೆ ವರ್ಷಗಳಲ್ಲಿ ಮಿಂತ್ರಾ ಮತ್ತು ಜಬಾಂಗ್‌ಗಳ ಸುಸ್ಥಿರ ವಹಿವಾಟು ವಿಸ್ತರಣೆಯಲ್ಲಿ ಅನಂತ್‌ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರು 2015ರಲ್ಲಿ ಮಿಂತ್ರಾದ ಸಿಇಒ ಆಗಿ ಅಧಿಕಾರವಹಿಸಿಕೊಂಡಿದ್ದರು.

ತೆರವಾದ ಹುದ್ದೆಗೆ ಅಮರ್ ನಗರಂ ಅವರನ್ನು ನೇಮಿಸಲಾಗಿದೆ. ಇವರು ಫ್ಲಿಪ್‌ಕಾರ್ಟ್‌ ಗ್ರೂಪ್‌ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಅವರ ಅಧೀನದಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಅನಂತ್‌ ಅವರು ಹಾಟ್‌ಸ್ಟಾರ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದ್ದರೂ, ಈ ಸುದ್ದಿ ಖಚಿತಪಟ್ಟಿಲ್ಲ.

ಆನ್‌ಲೈನ್‌ ಫ್ಯಾಷನ್‌ ಅಂತರ್ಜಾಲ ತಾಣ ಮಿಂತ್ರಾವನ್ನು ಫ್ಲಿಪ್‌ಕಾರ್ಟ್‌ 2014ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. 2016ರಲ್ಲಿ ಮಿಂತ್ರಾ, ಜಬಾಂಗ್‌ ವಶಪಡಿಸಿಕೊಂಡಿತ್ತು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !