ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂತ್ರಾ ಸಿಇಒ ಅನಂತ್‌ ಪದತ್ಯಾಗ

Last Updated 14 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಇ–ಕಾಮರ್ಸ್‌ ಫ್ಲಿಪ್‌ಕಾರ್ಟ್‌ನ ಅಂಗಸಂಸ್ಥೆಗಳಾಗಿರುವ ಮಿಂತ್ರಾ ಮತ್ತು ಜಬಾಂಗ್‌ನ ಸಿಇಒ ಅನಂತ್‌ ನಾರಾಯಣನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಫ್ಯಾಷನ್‌ ಇ–ಕಾಮರ್ಸ್‌ ಮಾರುಕಟ್ಟೆಯಲ್ಲಿ ಮೂರುವರೆ ವರ್ಷಗಳಲ್ಲಿ ಮಿಂತ್ರಾ ಮತ್ತು ಜಬಾಂಗ್‌ಗಳ ಸುಸ್ಥಿರ ವಹಿವಾಟು ವಿಸ್ತರಣೆಯಲ್ಲಿ ಅನಂತ್‌ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ತೆರವಾದ ಹುದ್ದೆಗೆ ಅಮರ್ ನಗರಂ ಅವರನ್ನು ನೇಮಿಸಲಾಗಿದೆ. ಇವರು ಫ್ಲಿಪ್‌ಕಾರ್ಟ್‌ ಗ್ರೂಪ್‌ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ಅವರ ಅಧೀನದಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಅನಂತ್‌ ಅವರು ಹಾಟ್‌ಸ್ಟಾರ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದ್ದರೂ, ಈ ಸುದ್ದಿ ಖಚಿತಪಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT