ಮೈಸೂರು: ‘ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಜಾಗತಿಕ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಆಮದು ವಸ್ತುಗಳ ಅವಲಂಬನೆ ಕಡಿಮೆ ಮಾಡಿ ದೇಶವು ಸ್ವಾವಲಂಬನೆ ಸಾಧಿಸಲು ಸಂಶೋಧನಾ ಕ್ಷೇತ್ರ ಬಲಪಡಿಸಬೇಕು’ ಎಂದು ಎಂದು ಸಿಇಸಿ ಫ್ಲೇವರ್ಸ್ ಆ್ಯಂಡ್ ಫ್ರಾಗ್ರೆನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎ.ಅಪ್ಪಾರಾವ್ ಹೇಳಿದರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ)ಯಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ’ಯಲ್ಲಿ ‘ಅಭಿವೃದ್ಧಿಯಲ್ಲಿ ಒಳಗೊಳ್ಳುವಿಕೆ’ (ಇನ್ಕ್ಲೂಸಿವ್ ಗ್ರೋಥ್) ಕುರಿತು ಮಾತನಾಡಿ, ‘ಕಚ್ಚಾ ತೈಲ ಸೇರಿದಂತೆ ಇಲ್ಲಿ ಲಭ್ಯವಿಲ್ಲದ ವಸ್ತುಗಳನ್ನು ಹೊರತುಪಡಿಸಿ ಉಳಿದವುಗಳನ್ನು ನಾವೇ ಉತ್ಪಾದಿಸಬೇಕು. ಆತ್ಮನಿರ್ಭರ ಭಾರತದ ಕನಸನ್ನು ನನಸಾಗಿಸಬೇಕು’ ಎಂದರು.

‘ಫ್ಲೇವರ್ (ರುಚಿ) ಉದ್ಯಮವು ಸವಾಲುಗಳನ್ನು ಎದುರಿಸುತ್ತಿದ್ದು, ನೈಸರ್ಗಿಕ ಸಂಶ್ಲೇಷಿತ ಅಣು ಮತ್ತು ಕಿಣ್ವಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಯುದ್ಧಗಳು ಸರಕು ಪೂರೈಕೆ ಸರಪಳಿಯನ್ನೇ ತುಂಡರಿಸಿದೆ. ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜೊತೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ’ ಎಂದರು.

‘ಪ್ರೊಪಿಲೀನ್ ಗ್ಲೈಕಾಲ್ ಎಂಬ ಬಣ್ಣರ ಹಿತವಾದ ಮತ್ತು ವಾಸನೆಯಿಲ್ಲದ ರಾಸಾಯನಿಕ ದ್ರವ ಲೀಟರ್ಗೆ ₹ 130ಕ್ಕೆ ಸಿಗುತ್ತಿತ್ತು. ಇದೀಗ ₹ 400ಕ್ಕೇರಿದೆ. ಇದಕ್ಕೆ ನಾವು ಕೊರಿಯಾ ಹಾಗೂ ಅಮೆರಿಕ ದೇಶವನ್ನು ಅವಲಂಬಿಸಿದ್ದೇವೆ. ಇಂಥ ವಸ್ತುಗಳಲ್ಲಿ ಸ್ವಾವಲಂಬನೆ ಸಾಧಿಸಿದರೆ ನಾವೇ ಜಾಗತಿಕ ನಾಯಕರಾಗುತ್ತೇವೆ’ ಎಂದು ಉದಾಹರಿಸಿದರು.

‘ವಿಶ್ವ ಆಹಾರ ಕ್ಷೇತ್ರದಲ್ಲಿ ತಂತ್ರಜ್ಞಾನದ ಆವಿಷ್ಕಾರ ವೇಗವಾಗಿ ನಡೆಯುತ್ತಿದ್ದು, ವಿಶ್ವದ ಆಹಾರಾಭ್ಯಾಸದ ಚಿತ್ರಣವನ್ನೇ ಬದಲಿಸಿದೆ. ಆಹಾರ ರುಚಿ ಮತ್ತು ಸುಗಂಧ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಂದಿದೆ. ರುಚಿಗಳಲ್ಲಿ (ಫ್ಲೇವರ್ಸ್) ಮತ್ತಷ್ಟು ಗುಣಮಟ್ಟ ಹಾಗೂ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಿದೆ. ತಾಯಿ ಹಾಲಿನಿಂದ ಮೀನಿನ ಮೊಟ್ಟೆಯಲ್ಲಿನ ಪೌಷ್ಟಿಕ ವಿನ್ಯಾಸವನ್ನು ಅರಿಯುವುದು ಈಗ ಸುಲಭ ಸಾಧ್ಯವಾಗಿದೆ’ ಎಂದರು.

ನಿಖರತೆಯಿಂದ: ‘ರುಚಿ ಹಾಗೂ ಸುಗಂಧದ ಅಭಿವೃದ್ಧಿಯಲ್ಲಿ ಮ್ಯಾಪಿಂಗ್ ಮತ್ತು ನಿಖರತೆಯು ತಂತ್ರಜ್ಞಾನ ದಿಂದ ಸಾಧ್ಯವಾಗಿದೆ. ಟ್ರೆಕ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿ, ವಿವಿಧ ಹಣ್ಣುಗಳ ಸ್ವಾದದ ವಿನ್ಯಾಸವನ್ನು ಮ್ಯಾಪಿಂಗ್ ಮಾಡಿದ್ದೆವು. ಮಾವಿನ ಹಣ್ಣಿನಲ್ಲಿ ಬಾದಾಮಿ– ಆಲ್ಫಾನ್ಸೊ, ರಸಪುರಿ, ತೋತಾಪುರಿ, ಹಿಮಾ ಪಸಂದ್ ಸೇರಿದಂತೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ 60 ಬಗೆಯ ತಳಿಗಳ ಸ್ವಾದದ ಮ್ಯಾಪಿಂಗ್ ಮಾಡಿ, ಅದನ್ನು ಯಂತ್ರಕ್ಕೆ ಸೇರಿಸಿದೆವು. ಯಾವುದೇ ಮಾವಿನ ತಳಿಯನ್ನು ಒಟ್ಟಿಗೆ ಹಾಕಿದರೂ ಎಲೆಕ್ಟ್ರಾನಿಕ್ ತಂತ್ರಜ್ಞಾನವೇ ಮೌಲ್ಯಮಾಪನ ಮಾಡಿ ಸ್ವಾದ ಹಾಗೂ ಸುವಾಸನೆಯ ಉತ್ಪನ್ನವನ್ನು ನೀಡುತ್ತಿತ್ತು. ಈ ಹಂತದವರೆಗೆ ನಮ್ಮ ತಂತ್ರಜ್ಞಾನ ಬೆಳೆದಿದೆ’ ಎಂದು ವಿವರಿಸಿದರು.

ಸಂಸ್ಥೆಯ ನಿರ್ದೇಶಕ ಪ್ರೊ.ಗಿರಿಧರ ಪರ್ವತಂ, ವಿಜ್ಞಾನಿ ಅಶುತೋಷ್ ಎ.ಇನಾಂದಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-39-2081761786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.