ತಮಿಳುನಾಡು ಮಾರುಕಟ್ಟೆಗೆ ‘ನಂದಿನಿ’ ಉತ್ಪನ್ನ ಪ್ರವೇಶ

ಶುಕ್ರವಾರ, ಮಾರ್ಚ್ 22, 2019
27 °C

ತಮಿಳುನಾಡು ಮಾರುಕಟ್ಟೆಗೆ ‘ನಂದಿನಿ’ ಉತ್ಪನ್ನ ಪ್ರವೇಶ

Published:
Updated:
Prajavani

ಚೆನ್ನೈ : ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್‌) ‘ನಂದಿನಿ’ ಬ್ರ್ಯಾಂಡ್‌ನ ಹಾಲು ಮತ್ತು ಹಾಲಿನ ವೈವಿಧ್ಯಮಯ ಉತ್ಪನ್ನಗಳು ಈಗ ತಮಿಳುನಾಡು ಮಾರುಕಟ್ಟೆಗೆ ಲಗ್ಗೆ ಹಾಕಿವೆ.

ಸುಂದರಂ ಬಿಎನ್‌ಪಿ ಪರಿಬಾಸ್‌ ಹೋಂ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ಆಚಾರ್ಯ ಅವರು, ಇಲ್ಲಿ ನಡೆದ ಸಮಾರಂಭದಲ್ಲಿ ‘ನಂದಿನಿ’ ಬ್ರ್ಯಾಂಡ್‌ನ  ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿದರು. ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮುಲ್‌) ಅಧ್ಯಕ್ಷ ಬಿ. ಜಿ. ಆಂಜನಪ್ಪ ಅವರು ಉಪಸ್ಥಿತರಿದ್ದರು.

ನಂದಿನಿ ಉತ್ಪನ್ನಗಳ ಪ್ಯಾಕಿಂಗ್‌ ಮತ್ತು ಮಾರಾಟ ಉದ್ದೇಶಕ್ಕೆ ‘ಬಮುಲ್‌’, ಆರ್‌ಕೆಆರ್‌ ಡೇರಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !