ನವಲಗುಂದ: ಬಿಸಿಲಿನ ತಾಪಮಾನ ಏರಿಕೆ ಜತೆಗೆ ತರಕಾರಿ ಹಾಗೂ ವಿವಿಧ ಸೊಪ್ಪಿನ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗುವಂತೆ ಮಾಡಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಜವಾರಿ ಮೆಣಸಿನಕಾಯಿ ಕೆ.ಜಿಗೆ ₹200 ಹಾಗೂ ಬೀನ್ಸ್ ದರ ಕೆ.ಜಿಗೆ ₹160ಕ್ಕೆ ತಲುಪಿದೆ.

ಕೆ.ಜಿಗೆ ₹10 ರಿಂದ ₹15ಗೆ ಮಾರಾಟವಾಗುತ್ತಿದ್ದ ಟೊಮೆಟೊ ದರ ₹60ಗೆ ಹೆಚ್ಚಿದೆ. ಕ್ಯಾರೆಟ್ ಕೆ.ಜಿಗೆ ₹80ಗೆ ಮಾರಾಟವಾಗುತ್ತಿದೆ.

ಪ್ರಸಕ್ತ ವರ್ಷ ಪೂರ್ವ ಮುಂಗಾರು ಇನ್ನೂ ಆರಂಭವಾಗಿಲ್ಲ. ನೀರಿನ ಕೊರತೆಯಿಂದ ಇಳುವರಿ ಕುಸಿದಿದ್ದು ಮಾರುಕಟ್ಟೆಗೆ ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದೆ ಬೆಲೆ ಹೆಚ್ಚಾಗುತ್ತಿದೆ.

ದೊಣ್ಣೆ ಮೆಣಸಿನಕಾಯಿ ಕೆ.ಜಿಗೆ ₹120, ನುಗ್ಗೆಕಾಯಿ ಕೆ.ಜಿಗೆ ₹80, ಬೆಂಡೆಕಾಯಿ ಕೆ.ಜಿಗೆ ₹80, ಬದನೆಕಾಯಿ ಕೆ.ಜಿಗೆ ₹80, ಹೀರೆಕಾಯಿ ₹80, ಬೀಟ್ರೂಟ್ ₹60, ಹಾಗಲಕಾಯಿ ₹80, ಆಲೂಗಡ್ಡೆ ₹40, ಸೌತೆಕಾಯಿ ₹120, ಮೆಣಸಿನಕಾಯಿ ₹200, ಬಜ್ಜಿ ಮೆಣಸಿನಕಾಯಿ ₹80 ಗೆ ಮಾರಾಟವಾಗುತ್ತಿವೆ.

ಪಾಲಕ್ ಸೊಪ್ಪು ಒಂದು ಕಟ್ಟಿಗೆ ₹20, ಕೊತ್ತಂಬರಿ ಸೊಪ್ಪು ₹50ಕ್ಕೆ ಒಂದು ಕಟ್ಟು, ಮೂಲಂಗಿ ₹10ಗೆ ಒಂದು, ನಿಂಬೆ ಹಣ್ಣು ₹10ಗೆ ಎರಡು, ಮೆಂತೆ ₹20ಗೆ ಒಂಟು ಕಟ್ಟು ಮತ್ತು ಬೆಳ್ಳುಳ್ಳಿ ದರ ಕೆ.ಜಿಗೆ ₹160ಕ್ಕೆ ಹೆಚ್ಚಿದೆ.

‘ಮದುವೆ, ಜಾತ್ರೆ ಸೇರಿದಂತೆ ಅನೇಕ ಶುಭಕಾರ್ಯಗಳು ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು ನಡೆಯುತ್ತವೆ. ಶುಭ ಸಮಾರಂಭಗಳಿಗೆ ಅಡುಗೆ ತಯಾರಿಸಲು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬಳಸಲಾಗುತ್ತದೆ. ಹಾಗಾಗಿ ಬೀನ್ಸ್ಗೆ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ’ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು.

‘ಮೆಣಸಿನಕಾಯಿ ದರ ಕೆ.ಜಿಗೆ ₹200ಗೆ ಏರಿಕೆಯಾಗಿದೆ. ಆದರೆ, ನಿತ್ಯ ಅಡುಗೆಗೆ ಮೆಣಸಿನಕಾಯಿ ಬೇಕು. ಹೀಗಾಗಿ ಬೆಲೆ ಹೆಚ್ಚು ಇದ್ದರೂ ಅಲ್ಪ ಪ್ರಮಾಣದಲ್ಲಿ ಖರೀದಿ ಮಾಡಿದ್ದೇನೆ’ ಎಂದು ಇಲ್ಲಿನ ನಿವಾಸಿ ಯಲ್ಲಮ್ಮ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-24-1027324068

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.