ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ರಸ್ತೆಯಲ್ಲಿ ವಿಲಾಸಿನವಾಮಿ ಲ್ಯಾಂಡ್‌ಮಾರ್ಕ್‌

Last Updated 27 ಫೆಬ್ರುವರಿ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್‌ ಎಸ್ಟೇಟ್‌ ಸಂಸ್ಥೆ ನವಾಮಿ, ಮೈಸೂರು ರಸ್ತೆಯಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯ ಮೆಟ್ರೊ ನಿಲ್ದಾಣ ಬಳಿ ‘ನವಾಮಿ ಲ್ಯಾಂಡ್‌ಮಾರ್ಕ್‌’ ಹೆಸರಿನ ವಿಲಾಸಿ ಅಪಾರ್ಟ್‌ಮೆಂಟ್‌ ಯೋಜನೆ ಕಾರ್ಯಗತಗೊಳಿಸುತ್ತಿದೆ.

ನಾಲ್ಕು ಅಪಾರ್ಟ್‌ಮೆಂಟ್‌ ಗೋಪುರಗಳನ್ನು ಒಳಗೊಂಡಿರುವ ಎರಡು ಮತ್ತು ಮೂರು ಬೆಡ್‌ರೂಂಗಳ ಈ ಯೋಜನೆಯ ಆಸುಪಾಸಿನಲ್ಲಿ ಇರುವ ಹಸಿರು ಪರಿಸರದಿಂದಾಗಿ ನಿಸರ್ಗದ ಮಧ್ಯೆ ವಾಸಿಸುವ ಅನುಭವ ನೀಡಲಿದೆ.

ವಾಸ್ತು ಪ್ರಕಾರವೇ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುತ್ತಿರುವುದು ಈ ಯೋಜನೆಯ ಇನ್ನೊಂದು ವಿಶೇಷತೆಯಾಗಿದೆ. ಪ್ರತಿಯೊಂದು ಘಟಕವು 34 ಅಂತಸ್ತುಗಳನ್ನು ಹೊಂದಿರಲಿದೆ. ಪ್ರತಿಯೊಂದು ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಯು ವಿಶಾಲವಾಗಿರಲಿದೆ.

ಅತ್ಯಾಧುನಿಕ ಸೌಲಭ್ಯಗಳಾದ ಸ್ಕೈ ಕ್ಲಬ್‌, ಸ್ಕೈ ಗಾರ್ಡನ್‌, ಟೆರೇಸ್‌ ಲಾಂಜ್‌, ಈಜುಗೊಳ ಮುಂತಾದವು ಇಲ್ಲಿನ ವಿಶೇಷತೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT