ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಮಾಹಿತಿಗೆ ‘ನೇಬರ್ಲಿ’

Last Updated 4 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಪ್ರಾದೇಶಿಕ ಭಾಷೆಗಳಲ್ಲಿ ಸ್ಥಳೀಯ ಮಾಹಿತಿಗಳನ್ನು ನೀಡುವ ನೇಬರ್ಲಿ ಆ್ಯಪ್‌ ಬೆಂಗಳೂರು ಮತ್ತು ದೆಹಲಿಯಲ್ಲಿ ತನ್ನ ಸೇವೆ ಆರಂಭಿಸಿದೆ.ಕೆಲವೇ ವಾರಗಳಲ್ಲಿ ಚೆನ್ನೈ, ಹೈದರಾಬಾದ್‌, ಪುಣೆ, ಕೋಲ್ಕತ್ತ, ಚಂಡೀಗಢ, ಲಖನೌ ಒಳಗೊಂಡು ಇನ್ನೂ ಹಲವು ನಗರಗಳಲ್ಲಿ ಬಳಕೆಗೆ ಬರಲಿದೆ.

ಈ ಆ್ಯಪ್‌ ಮೂಲಕಸ್ಥಳೀಯ ಮಟ್ಟದ ವಿಳಾಸಗಳು ಹಾಗೂ ಸ್ಥಳೀಯ ಮಾಹಿತಿಯನ್ನು ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಪಡೆಯಬಹುದು. ಒಂದು ನಿರ್ದಿಷ್ಟ ಪ್ರದೇಶದಲ್ಲಿರುವಸಿನಿಮಾ ಮಂದಿರ, ಶಾಪಿಂಗ್ ಮಾಲ್‌, ಆಸ್ಪತ್ರೆ, ಹೋಟೆಲ್‌, ಟ್ಯೂಷನ್‌ ಕೇಂದ್ರಗಳ ಮಾಹಿತಿಗಳನ್ನು ಅದೇ ಪ್ರದೇಶದಲ್ಲಿ ವಾಸವಿರುವವರಿಂದ ಪಡೆಯಬಹುದು. ಅಂದಾಜು 1 ರಿಂದ 5 ಕಿ.ಮೀ ವ್ಯಾಪ್ತಿಯೊಳಗೆ ಮಾತ್ರವೇ ಈ ಸೇವೆ ಸಿಗಲಿದೆ.

ಹೊಸದಾಗಿ ಒಂದು ಪ್ರದೇಶಕ್ಕೆ ವಾಸಕ್ಕೆ ಬರುವವರಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ. ಬಹಳ ವರ್ಷಗಳಿಂದ ಒಂದೇ ಕಡೆ ವಾಸವಿದ್ದರೂ ನಮಗೆ ಬಹಳಷ್ಟು ವಿಷಯಗಳು ತಿಳಿದಿರುವುದೇ ಇಲ್ಲ. ಹತ್ತಿರದಲ್ಲೆ ಇರುವ ಮೆಕ್ಯಾನಿಕ್ ಸೆಂಟರ್, ಚಾಟ್ಸ್‌ ಸಿಗುವ ಜಾಗ ಹೀಗೆ ಇನ್ನೂ ಕೆಲವು ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ. ಇಂತಹದ್ದನ್ನು ‘ನೇಬರ್ಲಿ ಆ್ಯಪ್‌’ ಮೂಲಕ ತಿಳಿದುಕೊಳ್ಳಬಹುದು.

‘ಆ್ಯಪ್‌ ಬಳಕೆದಾರರು ಪ್ರಶ್ನೆ ಕೇಳುವ ಮತ್ತು ಪ್ರತಿಕ್ರಿಯೆ ನೀಡುವ ಆಯ್ಕೆಗಳೆರಡೂ ಇಲ್ಲಿವೆ.ಕೇಳಿದ ಮಾಹಿತಿ ತಕ್ಷಣಕ್ಕೆ ಸಿಗುತ್ತದೆ ಎಂದೇನೂ ಇಲ್ಲ. ಆದರೆ, ಸಿಗುವ ಮಾಹಿತಿ ವಿಶ್ವಾಸಾರ್ಹವಾಗಿದ್ದು, ಖಚಿತವಾಗಿಯಂತೂ ಇರುತ್ತದೆ’ ಎಂದು ನೇಬರ್ಲಿಯ ಹಿರಿಯ ಉತ್ಪನ್ನ ವ್ಯವಸ್ಥಾಪಕ ಬೆನ್‌ ಫೋಹ್ನರ್‌ ತಿಳಿಸುತ್ತಾರೆ.

ಆ್ಯಪ್‌ ಬಳಕೆಗೆ ಹೀಗೆ ಮಾಡಿ

ಗೂಗಲ್‌ ಐಡಿ ಮೂಲಕ ಆ್ಯಪ್‌ಗೆ ಸೈನ್‌ ಇನ್‌ ಆಗಬೇಕು. ನಿಮ್ಮ ಮೊದಲ ಹೆಸರು ಮತ್ತು ಪ್ರೊಫೈಲ್‌ ಚಿತ್ರ ಮಾತ್ರವೇ ನಿಮ್ಮ ನೇಬರ್‌ಗೆ ಕಾಣಿಸುತ್ತದೆ. ಇ–ಮೇಲ್‌ ಐಡಿ ಹೈಡ್‌ ಆಗಿರುತ್ತದೆ. ಡಿವೈಸ್‌ ಲೊಕೇಷನ್‌ ಬಳಸಲು ಆ್ಯಪ್‌ಗೆ ಅನುಮತಿ ನೀಡಬೇಕು. ಟೈಪ್‌ ಮಾಡುವ ಮೂಲಕ ಇಲ್ಲವೇ ಧ್ವನಿ ಸಂದೇಶದ ಮೂಲಕಪ್ರಶ್ನೆ ಕೇಳಬಹುದು ಅಥವಾ ಉತ್ತರಿಸಬಹುದು.

ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್‌, ಗುಜರಾತಿ, ತೆಲುಗು, ಮಲಯಾಳಂ, ತಮಿಳು ಮತ್ತು ಬೆಂಗಾಲಿ ಭಾಷೆಗಳಲ್ಲಿ ಮಾಹಿತಿ ಪಡೆಯುವ ಮತ್ತು ಹಂಚಿಕೊಳ್ಳುವ ಆಯ್ಕೆ ಇದರಲ್ಲಿದೆ. ಸದ್ಯಕ್ಕೆ ಆಂಡ್ರಾಯ್ಡ್‌ ಪೋನ್‌ ಬಳಕೆದಾರರಿಗೆ ಮಾತ್ರವೇ ಇದು ಲಭ್ಯವಿದೆ. ಐಫೋನ್‌ಗಳಲ್ಲಿಯೂ ಶೀಘ್ರವೇ ಬಳಕೆಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT