ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಮಾನವನ ಮೆದುಳಿಗೆ ಚಿಪ್ ಅಳವಡಿಕೆ: ಇಲಾನ್ ಮಸ್ಕ್‌

ಮಾನವನ ಆಲೋಚನೆಗಳನ್ನು ಗ್ರಹಿಸಿ ಕಂಪ್ಯೂಟರ್‌ನೊಂದಿಗೆ ಸಂವಹನ ಮಾಡುವ ಸಾಧನ ಇದು
Last Updated 2 ಡಿಸೆಂಬರ್ 2022, 7:00 IST
ಅಕ್ಷರ ಗಾತ್ರ

ಸ್ಯಾನ್‌ ಪ್ರಾನ್ಸಿಸ್ಕೋ: ಆಲೋಚನೆಗಳನ್ನು ಗ್ರಹಿಸಿ, ಕಂಪ್ಯೂಟರ್‌ ಹಾಗೂ ಮೊಬೈಲ್‌ನೊಂದಿಗೆ ನೇರ ಸಂವಹನ ಮಾಡುವ ಚಿಪ್‌ ಒಂದನ್ನು ಮಾನವನ ಮೆದುಳಿಗೆ ಅಳವಡಿಸುವ ಕಾರ್ಯ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಗತ್ತಿನ ನಂಬರ್ 1 ಶ್ರೀಮಂತ ಉದ್ಯಮಿಇಲಾನ್‌ ಮಸ್ಕ್‌ ಹೇಳಿದ್ದಾರೆ.

ಇಲಾನ್‌ ಮಸ್ಕ್‌ ಒಡೆತನದ ‘ನ್ಯೂರಾಲಿಂಕ್‌‘ ಎನ್ನುವ ಕಂಪನಿ ಇಂಥಹದ್ದೊಂದು ಸಾಧನ ತಯಾರಿಸಿದ್ದು, ಆಲೋಚನೆಗಳ ಮೂಲಕ, ಮನುಷ್ಯರು ನೇರವಾಗಿ ಕಂಪ್ಯೂಟರ್‌ ಅಥವಾ ಮೊಬೈಲ್‌ನೊಂದಿಗೆ ಸಂವಹನ ಮಾಡಬಹುದಾಗಿದೆ.

ನಾನು ಕೂಡ ಈ ಚಿಪ್‌ ಅನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಮಸ್ಕ್‌ ಹೇಳಿದ್ದಾರೆ.

‘ಈ ಸಾಧನದ ಬಳಕೆಗೆ ಅನುಮತಿ ಕೋರಿ ಎಲ್ಲಾ ದಾಖಲೆಗಳನ್ನು ಎಫ್‌ಡಿಎಗೆ (ಅಮೆರಿಕದ ಆಹಾರ ಹಾಗೂ ಔಷಧಿ ಪ್ರಾಧಿಕಾರ) ಸಲ್ಲಿಸಲಾಗಿದೆ. ಬಹುಶಃ ಇನ್ನು ಆರು ತಿಂಗಳಲ್ಲಿ ಮನುಷ್ಯರ ತಲೆಯಲ್ಲಿ ಮೊದಲ ಚಿಪ್‌ ಅಳವಡಿಕೆಯಾಗಲಿದೆ‘ ಎಂದು ಇಲಾನ್‌ ಮಸ್ಕ್‌ ಹೇಳಿದ್ದಾರೆ.

‘ಮಾನವನಲ್ಲಿ ಚಿಪ್‌ ಅಳವಡಿಕೆ ಮಾಡುವ ಪ್ರಕ್ರಿಯೆ ಬಗ್ಗೆ ನಾವು ಕೆಲಸ ನಿರತರಾಗಿದ್ದೇವೆ. ಮಾನವನಲ್ಲಿ ಈ ಸಾಧನ ಅಳವಡಿಸುವುದಕ್ಕಿಂತ ಮೊದಲು ನಾವು ಭಾರೀ ಜಾಗರೂಕರಾಗಿಯೂ ಇದ್ದೇವೆ‘ ಎಂದು ಮಸ್ಕ್‌ ಹೇಳಿದ್ದಾರೆ.

ಈಗಾಗಲೇ ಕೋತಿಗಳಲ್ಲಿ ಈ ಪ್ರಯೋಗ ನಡೆದಿದ್ದು, ಅವುಗಳು ನ್ಯೂರಾಲಿಂಕ್‌ ಸಾಧನದ ಮೂಲಕ ವಿಡಿಯೋ ಗೇಮ್‌ ಆಡುವುದು ಕಂಡು ಬಂದಿತ್ತು.

ನಾಣ್ಯ ಗಾತ್ರದ ಈ ಸಾಧನವನ್ನು ಮಂಗಗಳ ತಲೆ ಬುರುಡೆಯಲ್ಲಿ ಅಳವಡಿಸಲಾಗಿತ್ತು.

ಇದೀಗ ಮಾನವನ ಮೇಲೆ ಪ್ರಯೋಗಕ್ಕೆ ಮಸ್ಕ್‌ ಮುಂದಾಗಿದ್ದಾರೆ.

ಆರಂಭಿಕ ಹಂತದಲ್ಲಿ ಸ್ನಾಯುಗಳು ನಿಷ್ಕ್ರಿಯವಾಗಿರುವವರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಕೈಗಳ ಮೂಲಕ ಬಳಸುವುದಕ್ಕಿಂತ ವೇಗವಾಗಿ ಈ ಸಾಧನದ ಮೂಲಕ ಮೊಬೈಲ್‌ ಆಪರೇಟ್‌ ಮಾಡಬಹುದು ಎಂದು ಮಸ್ಕ್‌ ಹೇಳಿದ್ದಾರೆ.elon

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT