ಹೊಸ ಪೇಯ ‘ಅಗೇನ್’ ಮಾರುಕಟ್ಟೆಗೆ

ಶುಕ್ರವಾರ, ಮಾರ್ಚ್ 22, 2019
21 °C

ಹೊಸ ಪೇಯ ‘ಅಗೇನ್’ ಮಾರುಕಟ್ಟೆಗೆ

Published:
Updated:
Prajavani

ಬೆಂಗಳೂರು: ರಾಸಾಯನಿಕಗಳನ್ನು ಬೆರೆಸದ, ಕಡಿಮೆ ಪ್ರಮಾಣದಲ್ಲಿ ಕೊಬ್ಬು ಮತ್ತು ಸಕ್ಕರೆ ಅಂಶ ಒಳಗೊಂಡಿರುವ  ಹೊಸ ಪೇಯವನ್ನು ಭಾರತದ ಮೊದಲ ಇ–ಕಾಮರ್ಸ್ ಸಂಸ್ಥೆ ಫ್ಯಾಬ್‌ಮಾರ್ಟ್‌ ಸಂಸ್ಥಾಪಕ ಸಂದೀಪ್‌ ಥಕ್ರಾನ್ ಮಾರುಕಟ್ಟೆಗೆ ತಂದಿದ್ದಾರೆ.

‘ಈ ಪಾನೀಯ ತಯಾರಿಸಲು ಹಲವು ಸಂಶೋಧನೆಗಳನ್ನು ಮಾಡಿದ್ದೇವೆ. ನನ್ನ ಪ್ರಕಾರ ಇಂತಹ ವಿಶೇಷ ಪೇಯ ಮಾರುಕಟ್ಟೆಗೆ ಬಂದಿರುವುದು ಇದೇ ಮೊದಲು’ ಎಂದು ಕೆ.ವಿ. ವೈತೀಶ್ವರನ್‌ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದು ಸಂಪೂರ್ಣ ನೈಸರ್ಗಿಕ ಪೇಯವಾಗಿದ್ದು, ಆರೋಗ್ಯ ಹಾಳು ಮಾಡುವಂತಹ ಯಾವುದೇ ಕೃತಕ ಬಣ್ಣ, ಕೃತಕ ರುಚಿ ಮತ್ತು ಸಂಸ್ಕರಿತ ಸಕ್ಕರೆ ಅಂಶಗಳನ್ನು ಒಳಗೊಂಡಿಲ್ಲ. ಕೆಡುತ್ತದೆ ಎಂಬ ಭಯದಿಂದ ಫ್ರಿಜ್‌ನಲ್ಲಿ ಇಡುವ ಅವಶ್ಯಕತೆಯೂ ಇಲ್ಲ’ ಎಂದು ಅವರು ಮಾಹಿತಿ ನೀಡಿದರು.

‘ಬಿಗ್‌ಬಾಸ್ಕೆಟ್‌ನಂತಹ ಆನ್‌ಲೈನ್‌ ತಾಣಗಳು, ನಾಮ್‌ಧಾರಿಸ್‌ ಸೂಪರ್‌ ಮಾರ್ಕೆಟ್‌ನಲ್ಲಿ ಲಭ್ಯವಿದೆ. ಪ್ರಸ್ತುತ ಸುಮಾರು 5 ಲಕ್ಷ ಬಾಟಲಿಗಳನ್ನು ತಯಾರಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಹೇಳಿದರು.

ನಾಲ್ಕು ಸ್ವಾದಗಳಲ್ಲಿ, 200 ಮಿ.ಲೀಟರ್‌ ಪ್ರಮಾಣದಲ್ಲಿ ಈ ಪೇಯ ಲಭ್ಯವಿದೆ. ₹50 ದರ ನಿಗದಿಪಡಿಸಲಾಗಿದ್ದು, ಆರಂಭಿಕ ಕೊಡುಗೆಯಾಗಿ ₹39ಕ್ಕೆ ನೀಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !