ಐ.ಟಿ. ವಿವರ ಸಲ್ಲಿಕೆಗೆ ಹೊಸ ಪೋರ್ಟಲ್ ಆರಂಭ

ನವದೆಹಲಿ: ಹೊಸ ಆಯ್ಕೆಗಳನ್ನು ಹೊಂದಿರುವ, ಆದಾಯ ತೆರಿಗೆ ವಿವರಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸುವ ಇ–ಪೋರ್ಟಲ್‌ಗೆ ಸೋಮವಾರ ಚಾಲನೆ ನೀಡಲಾಯಿತು.
ಹೊಸ ಪೋರ್ಟಲ್‌ನ ವಿಳಾಸ: http://incometax.gov.in. ಇದು ಈವರೆಗೆ ಬಳಕೆಯಲ್ಲಿ ಇದ್ದ http://incometaxindiaefiling.gov.inಗೆ ಬದಲಾಗಿ ಚಾಲ್ತಿಗೆ ಬಂದಿದೆ.
ಹೊಸ ಪೋರ್ಟಲ್ ಸ್ಥಿರವಾಗಿ ಕಾರ್ಯನಿರ್ವಹಿಸುವಂತೆ ಆಗಲು, ಆದಾಯ ತೆರಿಗೆ ಪಾವತಿದಾರರಿಗೆ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಆಗಲು ತುಸು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಸ ಪೋರ್ಟಲ್, ಆದಾಯ ತೆರಿಗೆ ವಿವರ ಸಲ್ಲಿಸುವುದನ್ನು ಸುಲಭಗೊಳಿಸುವಂತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆನ್‌ಲೈನ್ ತೆರಿಗೆ ಪಾವತಿ ವ್ಯವಸ್ಥೆ ಹಾಗೂ ಮೊಬೈಲ್ ಆ್ಯಪ್‌ಅನ್ನು ಈ ತಿಂಗಳ 18ರಂದು ಬಳಕೆಗೆ ಮುಕ್ತವಾಗಿಸಲಾಗುವುದು ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಹೇಳಿದೆ. ತೆರಿಗೆ ಪಾವತಿದಾರರಿಗೆ ರೀಫಂಡ್ ಮೊತ್ತ ತ್ವರಿತವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಹೊಸ ಪೋರ್ಟಲ್ ನೆರವಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.