ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝಾಗಲ್‍: ಹೊಸ ಮೊಬೈಲ್ ಆ್ಯಪ್ ಬಿಡುಗಡೆ

Last Updated 9 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್ ಪಾವತಿ ಸಂಸ್ಥೆ ಝಾಗಲ್, ತನ್ನ ಹೊಸ ಮೊಬೈಲ್‌ ಆ್ಯಪ್ ಬಿಡುಗಡೆ ಮಾಡಿದೆ.

ಈ ಹೊಸ ಆಪ್‌ನಲ್ಲಿ, ಗ್ರಾಹಕರು ಡಿಜಿಟಲ್ ಗಿಫ್ಟ್ ಕಾರ್ಡ್‌, ಇ-ವೋಚರ್‍, ಫ್ಯಾಷನ್, ಎಲೆಕ್ಟ್ರಾನಿಕ್ಸ್, ರೆಸ್ಟೋರೆಂಟ್‍, ಮನರಂಜನೆ, ಪ್ರವಾಸ, ಆಭರಣ ಮತ್ತಿತರ ವಿಭಾಗಗಳ 500ಕ್ಕೂ ಹೆಚ್ಚು ಬ್ರ್ಯಾಂಡ್‍ಗಳ ಕೊಡುಗೆಗಳನ್ನು ಪಡೆಯಬಹುದು. ಝಾಗಲ್ ಆ್ಯಪ್ ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಬಳಕೆದಾರರ ದತ್ತಾಂಶದ ಖಾಸಗಿತನ ಮತ್ತು ಸುರಕ್ಷತೆಯ ನಿರ್ವಹಣೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

***

ರೈಲ್‍ಯಾತ್ರಿ: ರಿಯಾಯ್ತಿ ಕೊಡುಗೆ
ಬೆಂಗಳೂರು:
ಬಸ್‌, ರೈಲ್ವೆ ಮುಂಗಡ ಟಿಕೆಟ್‌ ಕಾಯ್ದಿರಿಸುವ ಆನ್‌ಲೈನ್‌ ಸಂಸ್ಥೆ ರೇಲ್‍ಯಾತ್ರಿ, ಪ್ರಯಾಣಿಕರಿಗೆ ಭಾರಿ ರಿಯಾಯ್ತಿಗಳನ್ನು ಘೋಷಿಸಿದೆ.

ರೈಲು ಪ್ರಯಾಣಿಕರಿಗೆ ಹಬ್ಬದ ಕೊಡುಗೆಯಾಗಿ ನೀಡಿರುವ ‘ಮಹಾ ಬಚತ್ ಫೆಸ್ಟಿವ್ ಡಿಸ್ಕೌಂಟ್’ನಲ್ಲಿ ರೈಲು ಟಿಕೆಟ್‍ಗಳ ಮೇಲೆ ₹ 375ವರೆಗೆ ರಿಯಾಯ್ತಿ ಇದೆ. ಈ ಕೊಡುಗೆಯು ಇದೇ 30 ರವರೆಗೆ ಇರಲಿದೆ. ‘ಮಹಾ ಬಚತ್ ಸೇಲ್’ ರೈಲು ಮತ್ತು ಬಸ್ ಟಿಕೆಟ್‍ಗಳಿಗೆ ಅನ್ವಯವಾಗಲಿದೆ. ಕೊಡುಗೆಯನ್ನು ರೈಲ್‍ಯಾತ್ರಿ ಆ್ಯಪ್ ಮತ್ತು www.railyatri.in ಅಂತರ್ಜಾಲ ತಾಣದಲ್ಲಿ ಪಡೆಯಬಹುದು.

***

ಯೂಟ್ಯೂಬ್‌ನಲ್ಲಿ ಕೆನರಾ ಬ್ಯಾಂಕ್‌ ಮಾಹಿತಿ
ಬೆಂಗಳೂರು:
ಕೆನರಾ ಬ್ಯಾಂಕ್‌, ಯೂಟ್ಯೂಬ್‌ನಲ್ಲಿ ತನ್ನ ವಿವಿಧ ಸೇವೆ ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವ ‘ಕೆನರಾ ಬ್ಯಾಂಕ್‌ ಆಫಿಷಿಯಲ್‌’ (CanaraBankOfficial) ವಿಡಿಯೊವನ್ನು ಗ್ರಾಹಕರು ಗರಿಷ್ಠ ಪ್ರಮಾಣದಲ್ಲಿ ವೀಕ್ಷಿಸಿದ್ದಾರೆ.

ಈ ವಿಡಿಯೊಗಳು ಬ್ಯಾಂಕ್‌ನ ಬಗ್ಗೆ ಗ್ರಾಹಕರಿಗೆ ಸಮಗ್ರ ಮಾಹಿತಿ ನೀಡಲಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ ಕೆನರಾ ಬ್ಯಾಂಕ್‌ನ ಈ ವಿಡಿಯೊ ವೀಕ್ಷಿಸಿದ ಗ್ರಾಹಕರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಇದೆ ಎಂದು ಬ್ಯಾಂಕ್‌ ತಿಳಿಸಿದೆ.

***

ಎನ್‌ಎಂಡಿಸಿ ಗುತ್ತಿಗೆ ಒಪ್ಪಂದ ವಿಸ್ತರಣೆ
ಬೆಂಗಳೂರು:
ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ದೋಣಿಮಲೈ ಕಬ್ಬಿಣ ಅದಿರು ಗಣಿಯ ಗುತ್ತಿಗೆ ಒಪ್ಪಂದವನ್ನು ಕರ್ನಾಟಕ ರಾಜ್ಯ ಸರ್ಕಾರವು 20 ವರ್ಷಗಳ ಕಾಲ ವಿಸ್ತರಿಸಿದೆ. ಈ ಮೊದಲಿನ ಗುತ್ತಿಗೆಯು ಇದೇ 3ರಂದು ಕೊನೆಗೊಂಡಿತ್ತು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT