ನಿಪಾಣಿ: ‘ದಾಗಿನಿ’ ಕ್ಷೇತ್ರದಲ್ಲಿ ಸುಮಾರು ಎರಡು ಶತಮಾನಗಳ ಶ್ರೀಮಂತ ಪರಂಪರೆಯನ್ನು ಹೊಂದಿರುವ ಚಂದೂಕಾಕಾ ಸರಾಫ್ ಜುವೆಲ್ಸ್ ಸಂಸ್ಥೆಯ 20ನೇ ಶಾಖೆಯಾದ ‘ನಿಪಾಣಿ ಸ್ವರ್ಣದಳ’ದ ಭವ್ಯ ಉದ್ಘಾಟನೆ ಸಮಾರಂಭ ಇಲ್ಲಿನ ಸಂತ ಬಾಬಾ ಮಹಾರಾಜ ಕಾಂಪ್ಲೆಕ್ಸ್ (ಹನುಮಾನ್ ದೇವಾಲಯದ ಸಮೀಪ) ಶನಿವಾರ ನೆರವೇರಿತು.

ಉದ್ಘಾಟನಾ ಸಮಾರಂಭದಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಮರ್ ಬಾಗೇವಾಡಿ, ಐ.ಎಂ.ಎ. ನಿಪಾಣಿ ಅಧ್ಯಕ್ಷ ಡಾ.ಕೌಸ್ತುಭ ಖಾಂಡಕೆ, ಬಸವೇಶ್ವರ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಸಿ.ಬಿ. ಕರಬೆಟ್ಟಿ, ಅರಿಹಂತ್ ಬ್ಯಾಂಕಿನ ಅಧ್ಯಕ್ಷ ಉತ್ತಮ್ ಪಾಟೀಲ, ಉದ್ಯಮಿಗಳಾದ ಚಂದ್ರಕಾಂತ್ ಕೋಠಿವಾಲೆ ಮತ್ತು ಇರ್ಫಾನ್ ಮಹತ್, ಅರಿಹಂತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಅಭಿನಂದನ್ ಪಾಟೀಲ ಹಾಗೂ ಚಂದೂಕಾಕಾ ಸರಾಫ್ ಜುವೆಲ್ಸ್ನ ನಿರ್ದೇಶಕ ಅತುಲ್ ಶಾ, ಸಂಗೀತಾ ಅತುಲ್ ಶಾ, ಸಿದ್ಧಾರ್ಥ ಶಾ, ಆದಿತ್ಯ ಶಾ ಮತ್ತು ದಾಮಿನಿ ಶಾ ಅವರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಪರಂಪರೆ, ವಿಶ್ವಾಸ ಮತ್ತು ಶ್ರೇಷ್ಠ ಮಾಡೆಲ್ ಒಳಗೊಂಡಿರುವ ಚಂದೂಕಾಕಾ ಸರಾಫ್ ಜುವೆಲ್ಸ್ ಬ್ರ್ಯಾಂಡ್ ಪೀಳಿಗೆಯಿಂದ ಪೀಳಿಗೆ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡಿದೆ. ನಿಪ್ಪಾಣಿ ನಾಗರಿಕರಿಗಾಗಿ ಈಗ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಪರಂಪರೆ ಹಾಗೂ ಆಧುನಿಕ ವಿನ್ಯಾಸಗಳ ವೈವಿಧ್ಯಮಯ ಸಂಗ್ರಹವನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ಉದ್ಘಾಟನಾ ಸಂದರ್ಭದಲ್ಲಿ ಗ್ರಾಹಕರಿಗಾಗಿ ವಿಶೇಷ ಆಕರ್ಷಕ ಆಫರ್ಗಳನ್ನು ಘೋಷಿಸಲಾಗಿದೆ. ಇದರಡಿ ಪ್ರತಿ 10 ಗ್ರಾಂ ಚಿನ್ನದ ಮೇಲೆ ₹3000 ವರೆಗೆ ನೇರ ಉಳಿತಾಯ ಲಭ್ಯವಿದ್ದು, ಚಿನ್ನದ ಆಭರಣಗಳ ಮಜೂರಿಯಲ್ಲಿ ಶೇ 20 ರಿಯಾಯಿತಿ ಹಾಗೂ ವಜ್ರಾಭರಣಗಳ ಮಜೂರಿಯಲ್ಲಿ ಶೇ 100 ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ಎಲ್ಲಾ ಅವಕಾಶಗಳು ಏ.26ರವರೆಗೆ ಇರಲಿವೆ ಎಂದು ಸಂಸ್ಥೆಯ ನಿರ್ದೇಶಕ ಸಿದ್ಧಾರ್ಥ ಶಾ ಹಾಗೂ ಆದಿತ್ಯ ಶಾ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-21-1780099938

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.