ನಿಪ್ಪಾಣಿ: ‘ಕಾರ್ಖಾನೆಯ 40ನೇ ಕಬ್ಬು ನುರಿಸುವ ಹಂಗಾಮಿನ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ. 11,000 ಟಿಸಿಡಿಗೆ ಕಬ್ಬು ನುರಿಸುವ ಕ್ಷಮತೆ ಹೆಚ್ಚಾಗಿದ್ದರಿಂದ ಕಾರ್ಖಾನೆಯ ಆರ್ಥಿಕತೆಗೆ ಉತ್ತೇಜನ ದೊರಕಲಿದೆ. ಕಾರ್ಖಾನೆಯ ಅಭಿವೃದ್ಧಿಯೊಂದಿಗೆ ಸದಸ್ಯರ, ಕಾರ್ಮಿಕರ, ರೈತರ ಏಳಿಗೆಗೆ ಶ್ರಮಿಸಲಾಗುತ್ತಿದೆ' ಎಂದು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಸ್ಥಳೀಯ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ (ಮಲ್ಟಿ ಸ್ಟೇಟ್)ನ 40ನೇ ಹಂಗಾಮಿನ ಯಾಂತ್ರಿಕ ರೋಲರ್ಗಳ ಪೂಜೆಯನ್ನು ಭಾನುವಾರ ನೆರವೇರಿಸಿ ಅವರು ಮಾತನಾಡಿದರು.

‘ಕಾರ್ಖಾನೆಯು ಸಂಪೂರ್ಣ ಆಧುನೀಕರಣದೊಂದಿಗೆ ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಪ್ರಸ್ತುತ ವರ್ಷ ಯಶಸ್ವಿ ಸಾಧನೆಗೆ ಪೂರ್ಣ ತಾಂತ್ರಿಕ ಮತ್ತು ಇತರ ವ್ಯವಸ್ಥೆಗಳನ್ನು ಮಾಡಲಾಗಿದೆ’ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ‘ಕಾರ್ಖಾನೆಯು ಸಕ್ಕರೆ ಉತ್ಪಾದನೆಗೆ ಸೀಮಿತವಾಗಿ ಉಳಿಯದೇ ಇತರ ಉಪಉತ್ಪನ್ನಗಳನ್ನು ಉತ್ಪಾದಿಸಿ ಹೆಚ್ಚಿನ ಆದಾಯ ಪಡೆಯುತ್ತಿದೆ. ಇದರಿಂದ ಆರ್ಥಿಕವಾಗಿ ಸಧೃಢವಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಕಾರ್ಖಾನೆ ಅಭಿವೃದ್ಧಿ ಪಥದತ್ತ ಸಾಗಲು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಪ್ರಾಮಾಣಿಕ ಪರಿಶ್ರಮವಿದೆ, ಅವರೇ ನಮ್ಮ ಶಕ್ತಿ’ ಎಂದರು.

ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಸಂಚಾಲಕ ಜಯವಂತ ಭಾಟಲೆ, ರಮೇಶ ಪಾಟೀಲ, ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಸಮಿತ ಸಾಸನೆ, ರಾವಸಾಹೇಬ ಫರಾಳೆ, ಸುಹಾಸ ಗೂಗೆ, ರಾಮಗೊಂಡಾ ಚೌಗುಲೆ, ಭರತ ನಸಲಾಪೂರೆ, ಆನಂದ ಯಾದವ, ದೇವಪ್ಪ ದೇವಕತ್ತೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ ಇದ್ದರು. ಸಂಚಾಲಕ ಶ್ರೀಕಾಂತ ಬನ್ನೆ ಸ್ವಾಗತಿಸಿದರು. ಗಜಾನನ ರಾಮನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ಸುನೀಲ ತಳಂದಗೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-21-630253182

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.