ನೀರವ್‌ ಮೋದಿ ಹಸ್ತಾಂತರ ಮುಂದುವರಿದ ಪ್ರಯತ್ನ

ಬುಧವಾರ, ಮಾರ್ಚ್ 27, 2019
26 °C

ನೀರವ್‌ ಮೋದಿ ಹಸ್ತಾಂತರ ಮುಂದುವರಿದ ಪ್ರಯತ್ನ

Published:
Updated:

ನವದೆಹಲಿ: ‘ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಬ್ರಿಟನ್‌ಗೆ ಅಗತ್ಯ ಇರುವ ಸಹಾಯವನ್ನು ಸಿಬಿಐ ಮುಂದುವರಿಸಲಿದೆ’ ಎಂದು ಸಂಸ್ಥೆಯ ವಕ್ತಾರ ನಿತಿನ್‌ ವಾಕನ್ಕರ್‌ ತಿಳಿಸಿದ್ದಾರೆ.

ನೀರವ್ ಮೋದಿಯನ್ನು ತನಗೆ ಹಸ್ತಾಂತರಿಸುವಂತೆ ಭಾರತ ಮಾಡಿರುವ ಮನವಿಯನ್ನು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಹಳುಹಿಸಲಾಗಿದೆ ಎಂದು ಬ್ರಿಟನ್‌ನ ಗೃಹ ಕಾರ್ಯದರ್ಶಿ ಈಚೆಗಷ್ಟೇ ತಿಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ.

ಮೋದಿಯನ್ನು ವಶಕ್ಕೆ ಒಪ್ಪಿಸುವಂತೆ ಭಾರತ 2018ರ ಜುಲೈನಲ್ಲಿಯೇ ಬ್ರಿಟನ್‌ಗೆ ಮನವಿ ಮಾಡಿತ್ತು. ಎರಡು ದಿನಗಳ ಹಿಂದೆಯೇ  ಭಾರತದ ಮನವಿಯನ್ನು ಕೋರ್ಟ್‌ಗೆ ಕಳುಹಿಸಲಾಗಿದೆ ಎಂದು ಮೂಲಗಳು ಇ.ಡಿಗೆ ತಿಳಿಸಿವೆ.

ಜಾರಿ ನಿರ್ದೇಶನಾಲಯ ಮತ್ತು ಸಿಬಿಐನ ಜಂಟಿ ತಂಡವು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದು, ಭಾರತದ ಪ್ರಕರಣ ಮತ್ತು ನೀರವ್‌ ಮೋದಿ ವಿರುದ್ಧ ಇರುವ ಸಾಕ್ಷ್ಯಗಳನ್ನು ವಕೀಲರಿಗೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಮನವಿಯನ್ನು ಇಂಗ್ಲೆಂಡ್‌ ಪರಿಗಣಿಸುವ ಹಂತದಲ್ಲಿಯೇ ಇದೆ. ಮೋದಿಯನ್ನು ವಶಕ್ಕೆ ಪಡೆಯಲು ಅಗತ್ಯ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

ಪಿಎನ್‌ಬಿಯಿಂದ ₹ 13 ಸಾವಿರ ಕೋಟಿ ಸಾಲ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಾರಾಷ್ಟ್ರದ ಕಿಹಿಮ್‌ ಬೀಚ್‌ ಬಳಿ ಇದ್ದ 30 ಸಾವಿರ ಚದರ ಅಡಿಯ ಬಂಗ್ಲೆಯನ್ನು ಜಿಲ್ಲಾಡಳಿತ ಶುಕ್ರವಾರ ನೆಲಸಮಗೊಳಿಸಿದೆ. ಹಾಂಕಾಂಗ್‌, ಸ್ವಿಟ್ಜರ್ಲೆಂಡ್‌, ಅಮೆರಿಕ, ಸಿಂಗಪುರ ಮತ್ತು ಯುಎಇನಲ್ಲಿ ಮೋದಿಗೆ ಸೇರಿರುವ₹ 961.49 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !