ಗುರುವಾರ , ನವೆಂಬರ್ 21, 2019
20 °C
ಐಎಂಎಫ್‌–ವಿಶ್ವಬ್ಯಾಂಕ್‌ ವಾರ್ಷಿಕ ಸಭೆ

‘ಇಂದಿಗೂ ಬೆಳೆಯುತ್ತಿದೆ ಭಾರತದ ಆರ್ಥಿಕತೆ‘–ನಿರ್ಮಲಾ ಸೀತಾರಾಮನ್‌

Published:
Updated:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ವಾಷಿಂಗ್ಟನ್‌: ಜಗತ್ತಿನ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಗಳಲ್ಲಿ ಭಾರತ ಉಳಿದಿದೆ ಹಾಗೂ ವೇಗ ಇನಷ್ಟು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಭಾರತದ ಜಿಡಿಪಿ ಬೆಳವಣಿಗೆ ದರ ಕಡಿಮೆಯಾಗಲಿದೆ ಎಂದು ಅಂದಾಜಿಸಿದೆ. ಆದರೆ, ‘ದೇಶದ ಆರ್ಥಿಕತೆ ಇಂದಿಗೂ ವೇಗವಾಗಿ ಬೆಳವಣಿಗೆ ಕಾಣುತ್ತಲಿದೆ' ಎಂದು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. 

ಇದನ್ನೂ ಓದಿ: ಹೂಡಿಕೆಗೆ ಭಾರತಕ್ಕಿಂತ ಪ್ರಶಸ್ತ ಸ್ಥಳ ಬೇರೆ ಇಲ್ಲ: ನಿರ್ಮಲಾ ಸೀತಾರಾಮನ್

ಐಎಂಎಫ್‌ ಮತ್ತು ವಿಶ್ವಬ್ಯಾಂಕ್‌ ವಾರ್ಷಿಕ ಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಭಾಗಿಯಾಗಿದ್ದಾರೆ. ಇತ್ತೀಚಿನ ಐಎಂಎಫ್‌ ವರದಿಯಲ್ಲಿ ಚೀನಾ ಮತ್ತು ಭಾರತ ಎರಡೂ ರಾಷ್ಟ್ರಗಳ ಜಿಡಿಪಿ ಬೆಳವಣಿಗೆ ದರವನ್ನು ಶೇ 6.1ಕ್ಕೆ ಪರಿಷ್ಕರಿಸಿದೆ. ಆದರೆ, ನಾನು ‘ಚೀನಾದೊಂದಿಗೆ ಹೋಲಿಕೆ ಮಾಡಲು ಮುಂದಾಗಿಲ್ಲ‘ ಎಂದಿದ್ದಾರೆ. 

'ಐಎಂಎಫ್‌ ಇತ್ತೀಚಿನ ವರದಿಯಲ್ಲಿ ಜಗತ್ತಿನ ಎಲ್ಲ ಆರ್ಥಿಕತೆಗಳ ಬೆಳವಣಿಗೆ ದರ ಕಡಿಮೆಯಾಗುವುದಾಗಿ ಅಂದಾಜಿಸಿದೆ. ಭಾರತದ ಬೆಳವಣಿಗೆ ದರವನ್ನೂ ಪರಿಷ್ಕರಿಸಿದೆ. ಹಾಗಿದ್ದರೂ, ಆ ಎಲ್ಲ ಸಾಧ್ಯತೆಗಳೊಂದಿಗೂ ಭಾರತ ಇಂದಿಗೂ ವೇಗದ ಆರ್ಥಿಕತೆಯಾಗಿ ಬೆಳೆಯುತ್ತ ಮುಂದುವರಿದಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಿಡಿಪಿ: ವಿಶ್ವಬ್ಯಾಂಕ್‌, ಐಎಂಎಫ್‌ ಮುನ್ನೋಟ ಗಂಭೀರವಾಗಿ ಪರಿಗಣಿಸಿ

2018ರ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 6.8ರಷ್ಟು ದಾಖಲಾಗಿದ್ದು, 2019ರಲ್ಲಿ ಶೇ 6.1ಕ್ಕೆ ಕುಸಿಯಲಿದೆ ಎಂದು ಐಎಂಎಫ್‌ ಅಂದಾಜಿಸಿದೆ. 2020ರ ವೇಳೆಗೆ ಜಿಡಿಪಿ ಬೆಳವಣಿಗೆ ಶೇ 7ಕ್ಕೆ ಜಿಗಿಯಲಿದೆ ಎಂಬುದನ್ನೂ ವರದಿಯಲ್ಲಿ ಪ್ರಸ್ತಾಪಿಸಿದೆ. 

'ಎಂಟಲ್ಲ, ಏಳೂ ಅಲ್ಲ. ಅದು ಆರಕ್ಕೆ ತಲುಪಿದೆ. ಹೌದು, ಈ ಎಲ್ಲವೂ ಬಹುಮುಖ್ಯವೇ. ಆದರೆ, ಪ್ರತಿಕೂಲ ಪರಿಸ್ಥಿತಿಯಲ್ಲೂ ಭಾರತ ತೋರಿರುವ ಸಾಮರ್ಥ್ಯವನ್ನು ಅಲ್ಲಗಳೆಯುವಂತಿಲ್ಲ. ಈ ಹಿಂದೆ ಕಂಡಷ್ಟು ವೃದ್ಧಿ ಕಾಣದಿದ್ದರೂ ಬೆಳವಣಿಗೆ ಮುಂದುವರಿದಿದೆ' ಎಂದು ದೇಶದ ಆರ್ಥಿಕ ಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ. 

ಇನ್ನಷ್ಟು...

ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಭಾರತದಲ್ಲಿ ಕಡಿಮೆ: ಐಎಂಎಫ್‌

‘ಆರ್ಥಿಕ ಸ್ಥಗಿತ’ ಸ್ಥಿತಿಯತ್ತ ಭಾರತ?

1990ರ ನಂತರ ಭಾರತದ ಬಡತನ ಅರ್ಧದಷ್ಟು ಇಳಿಕೆ: ವಿಶ್ವಬ್ಯಾಂಕ್‌

ಪ್ರತಿಕ್ರಿಯಿಸಿ (+)