ಬುಧವಾರ, ಮೇ 18, 2022
28 °C

ಬಂಡವಾಳ ಹಿಂತೆಗೆತ: ಪಟ್ಟಿ ಶೀಘ್ರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ ಮಾಲೀಕತ್ವದಲ್ಲಿ ಇರುವ ಇನ್ನೂ ಯಾವೆಲ್ಲ ಕಂಪನಿಗಳಿಂದ ಬಂಡವಾಳ ಹಿಂತೆಗೆತ ಮಾಡಬಹುದು ಎಂಬ ಪಟ್ಟಿಯನ್ನು ನೀತಿ ಆಯೋಗವು ಇನ್ನು ಕೆಲವೇ ವಾರಗಳಲ್ಲಿ ಸಿದ್ಧಪಡಿಸಲಿದೆ ಎಂದು ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಮುಂದಿನ ಹಂತದಲ್ಲಿ ಯಾವ ಕಂಪನಿಗಳಿಂದ ಬಂಡವಾಳ ಹಿಂತೆಗೆತ ಆಗಲಿದೆ ಎಂಬ ಪ್ರಶ್ನೆಗೆ ಕುಮಾರ್ ಅವರು, ‘ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸವನ್ನು ಕೆಲವು ವಾರಗಳನ್ನು ಪೂರ್ಣಗೊಳಿಸಲಿದ್ದೇವೆ’ ಎಂದು ಉತ್ತರಿಸಿದರು.

ಬ್ಯಾಂಕಿಂಗ್‌ ವಲಯದಲ್ಲಿನ ಅನುತ್ಪಾದಕ ಸಾಲದ ನಿರ್ವಹಣೆಗೆ ‘ಆಸ್ತಿ ಪುನರ್‌ರಚನೆ ಮತ್ತು ಆಸ್ತಿ ನಿರ್ವಹಣಾ ಕಂಪನಿ’ ಸ್ಥಾಪಿಸುವ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರ್, ‘ಇದು ಅಗತ್ಯವಾದ ಕ್ರಮವಾಗಿತ್ತು’ ಎಂದರು.

‘ಇದನ್ನು ಮಾಡದೇ ಇದ್ದಿದ್ದರೆ, ಎನ್‌ಪಿಎ ಪ್ರಮಾಣ ತಗ್ಗಿಸಿಕೊಳ್ಳಲು ದೀರ್ಘ ಅವಧಿ ಬೇಕಾಗುತ್ತಿತ್ತು ಅಥವಾ ದೊಡ್ಡ ಮೊತ್ತದ ಬಂಡವಾಳವನ್ನು ಅದಕ್ಕಾಗಿ ಮೀಸಲಿಡಬೇಕಾಗುತ್ತಿತ್ತು’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು