ಖನಿಜ ಸಮಾವೇಶ: ವಾಣಿಜ್ಯಬಾಂಧವ್ಯ ವೃದ್ಧಿಗೆ ನೆರವು: ಸಚಿವ ಚೌಧರಿ ಬೀರೇಂದರ ಸಿಂಗ್‌

7

ಖನಿಜ ಸಮಾವೇಶ: ವಾಣಿಜ್ಯಬಾಂಧವ್ಯ ವೃದ್ಧಿಗೆ ನೆರವು: ಸಚಿವ ಚೌಧರಿ ಬೀರೇಂದರ ಸಿಂಗ್‌

Published:
Updated:
Deccan Herald

ನವದೆಹಲಿ: ‘ಖನಿಜ ಮತ್ತು ಲೋಹಗಳ ವಲಯವು ದೇಶಿ ಆರ್ಥಿಕತೆಯ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ’ ಎಂದು ಕೇಂದ್ರ ಉಕ್ಕು ಸಚಿವ ಚೌಧರಿ ಬೀರೇಂದರ ಸಿಂಗ್‌ ಅವರು ಹೇಳಿದ್ದಾರೆ.

ಎರಡು ದಿನಗಳ ಖನಿಜ ಮತ್ತು ಲೋಹಗಳ ಅಂತರರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ‘ಸಮಾವೇಶದ ಶಿಫಾರಸುಗಳು ಖನಿಜಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿ ರೂಪಿಸಲು ನೆರವಾಗಲಿವೆ. ಸರ್ಕಾರ ನಿಗದಿಪಡಿಸಿರುವ ರಾಷ್ಟ್ರೀಯ ಉಕ್ಕು ನೀತಿಗೂ ಸಮಾವೇಶ ಪೂರಕವಾಗಿದೆ’ ಎಂದರು.

‘ಲೋಹ ಮತ್ತು ಖನಿಜ ಕ್ಷೇತ್ರಗಳಲ್ಲಿ ಹೊಸ ಪಾಲುದಾರರನ್ನು ಕಂಡುಕೊಳ್ಳಲು ಮತ್ತು ಬೇರೆ ದೇಶಗಳ ಜತೆ ವಾಣಿಜ್ಯ ಬಾಂಧವ್ಯ ವೃದ್ಧಿಗೆ ಸಮಾವೇಶ ನೆರವಾಗಲಿದೆ’ ಎಂದು ಎನ್‌ಎಂಡಿಸಿ  ವ್ಯವಸ್ಥಾಪಕ ನಿರ್ದೇಶಕ ಬೈಜೇಂದ್ರ ಕುಮಾರ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !