ಪೆಟ್ರೋಲ್‌ಗೆ ಮತ್ತೆ ಸಬ್ಸಿಡಿಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

7

ಪೆಟ್ರೋಲ್‌ಗೆ ಮತ್ತೆ ಸಬ್ಸಿಡಿಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Published:
Updated:
Deccan Herald

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಬೆಲೆ ತಗ್ಗಿಸಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಇನ್ನು ಮುಂದೆ ಸಬ್ಸಿಡಿ ನೀತಿ ಅನುಸರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ದಾಖಲೆ ಮಟ್ಟಕ್ಕೆ ತಲುಪಿದ್ದ ಇಂಧನ ಬೆಲೆಗಳನ್ನು ಇಳಿಸಲು ಇತ್ತೀಚೆಗೆ ಕೇಂದ್ರ ಸರ್ಕಾರ ಎಕ್ಸೈಸ್‌ ಸುಂಕ ಇಳಿಸಿತ್ತು. ಇದರ ಜತೆಗೆ, ಪ್ರತಿ ಲೀಟರ್‌ಗೆ ₹ 1 ಸಬ್ಸಿಡಿ ನೀಡಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಿಗೆ ಕೇಳಿಕೊಂಡಿತ್ತು. ಇದರ ಹೊರತಾಗಿಯೂ ನಂತರದ ದಿನಗಳಲ್ಲಿ ಇಂಧನ ಬೆಲೆಯು ಏರಿಕೆ ಹಾದಿಯಲ್ಲಿದೆ. ಇನ್ನಷ್ಟು ಸಬ್ಸಿಡಿ ನೀಡಲು ಸರ್ಕಾರ ಕೇಳಿಕೊಳ್ಳಲಿದೆ ಎನ್ನುವ ಶಂಕೆ ಮೂಡಿಸಿತ್ತು. ಈ ಹಿಂದೆ ಜಾರಿಯಲ್ಲಿದ್ದ ಇಂಧನ ಸಬ್ಸಿಡಿ ನೀತಿಗೆ ಮರಳುವ ಆತಂಕ ಎದುರಾಗಿತ್ತು.

ಬೆಲೆ ನಿಗದಿ ಮಾಡುವಲ್ಲಿ ತೈಲ ಮಾರಾಟ ಸಂಸ್ಥೆಗಳ ಸ್ವಾತಂತ್ರ್ಯ ಮುಂದುವರೆಯಲಿದೆ. ಇತ್ತೀಚೆಗೆ ನೀಡಿರುವ ಸಬ್ಸಿಡಿ ಒಂದು ಬಾರಿ ಮಾತ್ರ. ಮತ್ತೆ ಸಬ್ಸಿಡಿ ನೀಡಬೇಕೆಂದು ಕೇಳಿಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಹೇಳಿಕೆಯಿಂದ ತೈಲ ಮಾರಾಟ ಸಂಸ್ಥೆಗಳ ಷೇರುಗಳ ಬೆಲೆ ಗುರುವಾರದ ವಹಿವಾಟಿನಲ್ಲಿ ಶೇ 19ರಷ್ಟು ಏರಿಕೆ ಕಂಡವು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !