ಸೋಮವಾರ, ಡಿಸೆಂಬರ್ 16, 2019
26 °C

ಈರುಳ್ಳಿ: ದೇಶದಾದ್ಯಂತ ಏಕರೂಪದ ಮಾರಾಟ ದರ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈರುಳ್ಳಿಯನ್ನು ದೇಶದಾದ್ಯಂತ ಒಂದೇ ದರದಲ್ಲಿ ಮಾರಾಟ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ.

‘ಈರುಳ್ಳಿ ಆಮದು ವಿಳಂಬ ಮಾಡುತ್ತಿಲ್ಲ. ದೇಶದಾದ್ಯಂತ ಏಕರೂಪದ ದರದಲ್ಲಿ ಮಾರಾಟ ಮಾಡುವ ಪ್ರಸ್ತಾವ ಕೂಡ ಇಲ್ಲ’ ಎಂದು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ದಾನ್ವೆ ರಾವ್‌ಸಾಹೇಬ್‌ ದಾದಾರಾವ್‌ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಪೂರೈಕೆ ಹೆಚ್ಚಿಸಿ ಬೆಲೆ ಏರಿಕೆಗೆ ಕಡಿವಾಣ ವಿಧಿಸಲು 1.2 ಲಕ್ಷ ಟನ್‌ಗಳಷ್ಟು ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಸಚಿವ ಸಂಪುಟವು ಕಳೆದ ತಿಂಗಳು ಸಮ್ಮತಿ ನೀಡಿತ್ತು. ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ ₹ 75 ರಿಂದ ₹ 120ರವರೆಗೆ ಮಾರಾಟ ಆಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು