ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿಯೇತರ ಎಲ್‌ಪಿಜಿ ದರ ₹ 15.5 ಏರಿಕೆ

Last Updated 1 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸಬ್ಸಿಡಿಯೇತರ ಅಡುಗೆ ಅನಿಲ ದರವನ್ನು (ಎಲ್‌ಪಿಜಿ) ಪ್ರತಿ ಸಿಲಿಂಡರ್‌ಗೆ ₹ 15.5ರಂತೆ ಏರಿಕೆ ಮಾಡಿವೆ.

ಇದರಿಂದ 14.2 ಕೆ.ಜಿ ಸಿಲಿಂಡರ್‌ ಮಾರಾಟ ದರ ₹ 574.5 ರಿಂದ ₹ 590ಕ್ಕೆ ಏರಿಕೆಯಾಗಿದೆ.

ವಿಮಾನ ಇಂಧನ (ಜೆಟ್‌ ಇಂಧನ)ದರ ಶೇ 1ರಷ್ಟು ಕಡಿಮೆ ಮಾಡಿದ್ದು, ಕಿಲೊ ಲೀಟರಿಗೆ ₹ 596.62ರಂತೆ ಇಳಿಕೆಯಾಗಿದೆ. ಇದರಿಂದ ಮಾರಾಟ ದರ ಪ್ರತಿ ಕಿಲೊ ಲೀಟರಿಗೆ ₹ 62,698.86ಕ್ಕೆ ತಲುಪಿದೆ.

ಸೀಮೆಎಣ್ಣೆ ದರ ಸತತ 26ನೇ ತಿಂಗಳಿನಲ್ಲಿಯೂ ಏರಿಕೆಯಾಗಿದ್ದು, ಪ್ರತಿ ಲೀಟರಿಗೆ 25 ಪೈಸೆ ಹೆಚ್ಚಾಗಿದೆ.

ಸಬ್ಸಿಡಿಯೇತರ ಸೀಮೆ ಎಣ್ಣೆಯ ದರ ಮುಂಬೈನಲ್ಲಿ ₹ 66.69 ರಿಂದ ₹ 66.58ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT