ಮಂಗಳವಾರ, ಜೂನ್ 2, 2020
27 °C

ಎಲ್‌ಪಿಜಿ ದರ ಕಡಿತ: ಪ್ರತಿ ಸಿಲಿಂಡರ್‌ಗೆ ₹60 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್‌ಪಿಜಿ ಸಿಲಿಂಡರ್‌

ನವದೆಹಲಿ: ಹೊಸ ಹಣಕಾಸು ವರ್ಷದ ಮೊದಲ ದಿನವೇ ಅಡುಗೆ ಅನಿಲ ಎಲ್‌ಪಿಜಿ ದರ ಕಡಿಮೆ ಮಾಡಲಾಗಿದೆ. ತೈಲ ಮಾರಾಟ ಕಂಪನಿಗಳು ಬುಧವಾರ 14.2 ಕೆ.ಜಿಯ  ಪ್ರತಿ ಸಿಲಿಂಡರ್‌ ಬೆಲೆ ₹60 ಇಳಿಕೆ ಮಾಡಿವೆ. 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆಯಾಗಿರುವ ಬೆನ್ನಲ್ಲೇ ಎಲ್‌ಪಿಜಿ ಸಿಲಿಂಡರ್‌ ದರ ಕಡಿತಗೊಳಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿ) ಪ್ರಕಾರ, ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ದರ ₹61.50 ಕಡಿತಗೊಳಿಸಲಾಗಿದ್ದು, ಪ್ರತಿ ಸಿಲಿಂಡರ್‌ಗೆ ₹714.50 ಆಗಲಿದೆ. 

ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ ಮೇಲೆ ₹65 ಕಡಿತಗೊಳಿಸಲಾಗಿದ್ದು, ಮಾರಾಟ ದರ ₹774.50 ತಲುಪಿದೆ. ಚೆನ್ನೈನಲ್ಲಿ ₹64.50 ಕಡಿತವಾಗಿ ₹761.50 ಆಗಿದೆ ಹಾಗೂ ಮುಂಬೈನಲ್ಲಿ ಪ್ರತಿ ಎಲ್‌ಪಿಜಿ ಸಿಲಿಂಡರ್‌ ದರ ₹62 ಕಡಿಮೆಯಾಗಿದೆ. ರಾಜ್ಯ ಸರ್ಕಾರಗಳ ವ್ಯಾಟ್‌ ಆಧಾರದ ಮೇಲೆ ನಗರಗಳಲ್ಲಿ ಸಿಲಿಂಡರ್‌ ಬೆಲೆ ವ್ಯತ್ಯಾಸವಾಗುತ್ತದೆ. 

ಕಳೆದ ವರ್ಷ ಆಗಸ್ಟ್‌ನಿಂದ ಆರು ಬಾರಿ ಅಡುಗೆ ಅನಿಲ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಮಾಡಲಾಗಿತ್ತು. 2020ರ ಫೆಬ್ರುವರಿ ನಂತರದಲ್ಲಿ ಈಗ ಎರಡನೇ ಬಾರಿ ದರ ಕಡಿತ ಘೋಷಣೆಯಾಗಿದೆ. ಮಾರ್ಚ್‌ನಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ದರ ದೇಶದಾದ್ಯಂತ ಮೆಟ್ರೊ ನಗರಗಳಲ್ಲಿ ₹52.50ರಷ್ಟು  ಕಡಿತಗೊಳಿಸಲಾಗಿತ್ತು. 

ವರ್ಷಕ್ಕೆ 14.2 ಕೆಜಿಯ 12 ಸಿಲಿಂಡರ್‌ ವರೆಗೂ ಸಬ್ಸಿಡಿ ಅನ್ವಯವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು