ಎನ್‌ಪಿಎ: 200 ಖಾತೆ ಮೇಲೆ ನಿಗಾ

7

ಎನ್‌ಪಿಎ: 200 ಖಾತೆ ಮೇಲೆ ನಿಗಾ

Published:
Updated:

ನವದೆಹಲಿ: ಬ್ಯಾಂಕ್‌ಗಳ ವಸೂಲಾಗದ ಸಾಲಗಳಿಗೆ (ಎನ್‌ಪಿಎ) ಕಡಿವಾಣ ಹಾಕುವ ಕ್ರಮಗಳ ಅಂಗವಾಗಿ ಭಾರತೀಯ ರಿಸರ್ವ್ ಬ್ಯಾಂಕ್‌, 200 ದೊಡ್ಡ ಖಾತೆಗಳನ್ನು ಪರಾಮರ್ಶೆಗೆ ಒಳಪಡಿಸಲು ಮುಂದಾಗಿದೆ.

ಈ ದೊಡ್ಡ ಮೊತ್ತದ ಸಾಲ ಖಾತೆಗಳಲ್ಲಿನ ವಸೂಲಾಗದ ಸಾಲದ ಒಟ್ಟಾರೆ ಮೊತ್ತ, ಸಂಬಂಧಿಸಿದ ಬ್ಯಾಂಕ್‌ಗಳು ಈ ಖಾತೆಗಳಿಗಾಗಿ ತೆಗೆದು ಇರಿಸಿರುವ ಮೊತ್ತದ ಪರಿಶೀಲನೆ ನಡೆಸಲಿದೆ. ಈ ಖಾತೆಗಳಲ್ಲಿ ಸಾಲ ವಸೂಲಿಗೆ ಬ್ಯಾಂಕ್‌ಗಳು ಅಗತ್ಯ ಕ್ರಮಗಳನ್ನು ಕೈಗೊಂಡಿರುವುದನ್ನೂ ಪರಿಗಣನೆಗೆ ತೆಗೆದುಕೊಳ್ಳಲಿದೆ.

ಈ ಖಾತೆಗಳಲ್ಲಿ ವಿಡಿಯೊಕಾನ್‌, ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌ ಸಂಸ್ಥೆಗಳೂ ಸೇರಿವೆ. ಸದ್ಯಕ್ಕೆ ಬ್ಯಾಂಕ್‌ಗಳ ‘ಎನ್‌ಪಿಎ’ ಪ್ರಮಾಣ ₹ 10.3 ಲಕ್ಷ ಕೋಟಿಗೆ ತಲುಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !