ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ ಬೆಲೆಗೆ ಮಿತಿ ನಿಗದಿ

Last Updated 19 ಏಪ್ರಿಲ್ 2022, 15:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (ಎನ್‌ಪಿಪಿಎ) ಮಧುಮೇಹ ನಿಯಂತ್ರಣ ಹಾಗೂ ಕೆಲವು ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳ ರಿಟೇಲ್ ಮಾರಾಟ ದರಕ್ಕೆ ಮಿತಿ ಹೇರಿದೆ.

ಈ ಔಷಧಗಳನ್ನು ತಯಾರಿಸುವ ಕಂಪನಿಗಳು ಇವುಗಳ ಬೆಲೆಯನ್ನು ಎನ್‌ಪಿಪಿಎ ನಿಗದಿ ಮಾಡಿರುವ ಮಟ್ಟದಲ್ಲಿ ಇರಿಸಬೇಕಿದೆ.

ಮೆಟ್‌ಫಾರ್ಮಿನ್‌ (ಎಕ್ಸ್‌ಟೆಂಡೆಡ್–ರಿಲೀಸ್)+ಟೆನೆಲಿಗ್ಲಿಪ್ಟಿನ್ ಮಾತ್ರೆಯ ಬೆಲೆ ಪ್ರತಿ ಮಾತ್ರೆಗೆ ₹ 7.14ಕ್ಕೆ, ಡಪಾಗ್ಲಿಫ್ಲೋಜಿನ್+ಮೆಟಾಫಾರ್ಮಿನ್ ಹೈಡ್ರೊಕ್ಲೋರೈಡ್ ಬೆಲೆ ₹ 10.7ಕ್ಕೆ ನಿಗದಿಯಾಗಿದೆ. ಈ ಮಾತ್ರೆಗಳನ್ನು ಮಧುಮೇಹಿಗಳು ಬಳಸುತ್ತಾರೆ.

ಹ್ಯೂಮನ್ ನಾರ್ಮಲ್ ಇಮ್ಯುನೊಗ್ಲೊಬುಲಿನ್ (10 ಎಂಎಲ್ ವಯಲ್‌ಗೆ ₹ 177.85), ಮೆಡ್ರಾಕ್ಸಿಪ್ರೊಜೆಸ್ಟಿರಾನ್ ಅಸಿಟೇಟ್ ಮಾತ್ರೆ (₹ 14.04) ಬೆಲೆಗೂ ಮಿತಿ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT