ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು (ಎನ್ಟಿಪಿಸಿ) ಕಳೆದ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹10,614 ಕೋಟಿ ನಿವ್ವಳ ಲಾಭ ಗಳಿಸಿದೆ.

2024–25ರ ಇದೇ ಅವಧಿಯಲ್ಲಿ ₹7,897 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಲಾಭದಲ್ಲಿ ಶೇ 34ರಷ್ಟು ಏರಿಕೆಯಾಗಿದೆ ಎಂದು ನಿಗಮವು ಷೇರುಪೇಟೆಗೆ ತಿಳಿಸಿದೆ.

ಆದರೆ, ಒಟ್ಟು ವರಮಾನವು ₹51,085 ಕೋಟಿಯಿಂದ ₹50,410 ಕೋಟಿಗೆ ಇಳಿದಿದೆ. ವೆಚ್ಚವು ₹43,237 ಕೋಟಿಯಷ್ಟಾಗಿದೆ.

ಕಳೆದ ಪೂರ್ಣ ಆರ್ಥಿಕ ವರ್ಷದಲ್ಲಿ ನಿಗಮದ ಲಾಭದಲ್ಲಿ ಶೇ 15ರಷ್ಟು ಹೆಚ್ಚಳವಾಗಿದ್ದು, ₹27,546 ಕೋಟಿಯಾಗಿದೆ ಎಂದು ತಿಳಿಸಿದೆ.

ಪ್ರತಿ ಈಕ್ವಿಟಿ ಷೇರಿಗೆ ₹3.5 ಲಾಭಾಂಶ ನೀಡಲು ನಿಗಮದ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.