ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ನಿಧಿ ನಿರ್ವಾಹಕರ ಸಂಖ್ಯೆ ಅಲ್ಪ ಹೆಚ್ಚಳ: ಮಾರ್ನಿಂಗ್‌ಸ್ಟಾರ್‌ ವರದಿ

Last Updated 5 ಮಾರ್ಚ್ 2022, 19:29 IST
ಅಕ್ಷರ ಗಾತ್ರ

ನವದೆಹಲಿ: ಮ್ಯೂಚುವಲ್‌ ಫಂಡ್‌ ಉದ್ಯಮದಲ್ಲಿ ಮಹಿಳಾ ನಿಧಿ ನಿರ್ವಾಹಕರ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಲ್ಪ ಏರಿಕೆ ಆಗಿದೆ ಎಂದು ಮಾರ್ನಿಂಗ್‌ಸ್ಟಾರ್‌ ವರದಿ ತಿಳಿಸಿದೆ.

ಉದ್ಯಮದಲ್ಲಿ ನಿಧಿ ನಿರ್ವಹಣೆ ಮಾಡುತ್ತಿರುವ ಮಹಿಳೆಯರ ಸಂಖ್ಯೆಯು 2021ರಲ್ಲಿ 30 ಇತ್ತು. 2022ರಲ್ಲಿ 32ಕ್ಕೆ ಏರಿಕೆ ಆಗಿದೆ. ಉದ್ಯಮದಲ್ಲಿ ಒಟ್ಟಾರೆ 399 ನಿಧಿ ನಿರ್ವಾಹಕರಿದ್ದು, ಇವರಲ್ಲಿ ಮಹಿಳೆಯರ ಪಾಲು ಶೇ 8ರಷ್ಟು ಮಾತ್ರ. ಕಳೆದ ವರ್ಷ ಒಟ್ಟಾರೆ ನಿಧಿ ನಿರ್ವಾಹಕ ಸಂಖ್ಯೆ 376 ಇತ್ತು.

ಮ್ಯೂಚುವಲ್‌ ಫಂಡ್‌ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯ ₹ 38 ಲಕ್ಷ ಕೋಟಿಗಳಷ್ಟು ಇದ್ದು, ಇದರಲ್ಲಿ ಮಹಿಳೆಯರು ನಿರ್ವಹಿಸುತ್ತಿರುವ ಸಂಪತ್ತು ಮೌಲ್ಯವು ₹ 4.55 ಲಕ್ಷ ಕೋಟಿಗಳಷ್ಟಿದೆ.

ಮಾರ್ನಿಂಗ್‌ಸ್ಟಾರ್‌ ಕಂಪನಿಯು 2017ರಲ್ಲಿ ಮೊದಲಿಗೆ ವರದಿ ಬಿಡುಗಡೆ ಮಾಡಿದಾಗ ಮಹಿಳಾ ನಿಧಿ ನಿರ್ವಾಹಕರ ಸಂಖ್ಯೆ 18 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT