ಮುಂಬೈ: ವಾಯುಯಾನ, ರಕ್ಷಣೆ ಮತ್ತು ಬಾಹ್ಯಾಕಾಶ ವಲಯಗಳಿಗೆ ಅಗತ್ಯವಾದ ಉನ್ನತ ಗುಣಮಟ್ಟದ ಕಚ್ಚಾ ವಸ್ತುಗಳ ಪೂರೈಕೆ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ 'ವಾಲ್-ಮೆಟ್ ಎಂಜಿನಿಯರಿಂಗ್' ಕಂಪನಿಯು ಬರೋಬ್ಬರಿ ₹ 200 ಕೋಟಿ ಬಂಡವಾಳ ಸಂಗ್ರಹಿಸಿದೆ.

ಭಾರತದ ಪ್ರಮುಖ ಸಂಪತ್ತು ನಿರ್ವಹಣಾ ಕಂಪನಿಯಾಗಿರುವ ನುವಾಮಾ ಗ್ರೂಪ್ನ ಅಂಗಸಂಸ್ಥೆಗಳಾದ 'ನುವಾಮಾ ಕ್ರಾಸ್ಓವರ್ ಆಪರ್ಚುನಿಟೀಸ್ ಫಂಡ್ಸ್' ಈ ಬೃಹತ್ ಮೊತ್ತದ ಹೂಡಿಕೆ ಮಾಡಿದ್ದು, ವಾಲ್-ಮೆಟ್ ಕಂಪನಿಯಲ್ಲಿ ಪಾಲನ್ನು ಪಡೆದುಕೊಂಡಿವೆ.

ವಿಶೇಷವೆಂದರೆ, 2007ರಲ್ಲಿ ಸ್ಥಾಪನೆಯಾದ ವಾಲ್-ಮೆಟ್ ಎಂಜಿನಿಯರಿಂಗ್ ಸಂಸ್ಥೆ ಪಡೆಯುತ್ತಿರುವ ಮೊಟ್ಟಮೊದಲ ಬಾಹ್ಯ ಬಂಡವಾಳ ಇದಾಗಿದೆ.

ಬಂಡವಾಳದ ಸದ್ಬಳಕೆ ಹೇಗೆ?

ಈ ಹೊಸ ಹೂಡಿಕೆಯ ನೆರವಿನಿಂದ ವಾಲ್-ಮೆಟ್ ಸಂಸ್ಥೆಯು ತನ್ನ ಪೂರೈಕೆಯ ಜಾಲವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದೆ. ಜೊತೆಗೆ, ತನ್ನ ದಾಸ್ತಾನು ಸಾಮರ್ಥ್ಯದ ವಿಸ್ತರಣೆ, ತಾಂತ್ರಿಕ ಮತ್ತು ಸಂಸ್ಕರಣಾ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಈ ಹಣವನ್ನು ಬಳಸಿಕೊಳ್ಳಲಿದೆ.

ಅಲ್ಲದೆ, ದೇಶೀಯ ಹಾಗೂ ಜಾಗತಿಕ ಮೂಲ ಉಪಕರಣ ತಯಾರಕರು (ಒಇಎಂ) ಮತ್ತು ಗ್ರಾಹಕರೊಂದಿಗಿನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಕಂಪನಿ ಹೊಂದಿದೆ.

ನಿರ್ಣಾಯಕ ಕಚ್ಚಾವಸ್ತುಗಳನ್ನು ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಪೂರೈಸುವ ನಿಟ್ಟಿನಲ್ಲಿ ಕಂಪನಿಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದ್ದು, ಇದು ಉತ್ಪಾದನಾ ವೆಚ್ಚವನ್ನು ಉಳಿಸಲು ಹಾಗೂ ದಕ್ಷತೆಯನ್ನು ಹೆಚ್ಚಿಸಲು ವಿಮಾನ ತಯಾರಕರಿಗೆ ಮತ್ತು ಒಇಎಂಗಳಿಗೆ ನೆರವಾಗಲಿದೆ.

ಪ್ರಸ್ತುತ ಜಾಗತಿಕ ವಿಮಾನ ತಯಾರಕರು ಭಾರತದಲ್ಲಿ ತಮ್ಮ ವಿಮಾನಗಳ ಜೋಡಣೆ ಮತ್ತು ಬಿಡಿಭಾಗಗಳ ಪೂರೈಕೆ ಜಾಲವನ್ನು ವಿಸ್ತರಿಸುತ್ತಿದ್ದು, ಇದೇ ಹೊತ್ತಲ್ಲಿ ಈ ಬೆಳವಣಿಗೆ ನಡೆದಿದ್ದು ಭಾರೀ ಮಹತ್ವ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.