ಬೆಂಗಳೂರು: ಭಾರತದ ಮುಂಚೂಣಿ ಸಂಪತ್ತು ನಿರ್ವಹಣಾ ಕಂಪನಿ ‘ನುವಾಮಾ’ 2026ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದ ಆರ್ಥಿಕ ವರದಿಯನ್ನು ಪ್ರಕಟಿಸಿದ್ದು, ₹269 ಕೋಟಿ ಲಾಭ ದಾಖಲಿಸಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿನ ಭಾರೀ ಏರಿಳಿತಗಳ ನಡುವೆಯೂ ‘ನುವಾಮಾ’ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಂಡಿದೆ ಎಂದು ಪ್ರಕಟಣೆ ಹೇಳಿದೆ.

2024–25ನೆಯ ಆರ್ಥಿಕ ವರ್ಷದಲ್ಲಿ ₹2,901 ಕೋಟಿ ಇದ್ದ ಕಂಪನಿಯ ಆದಾಯ, 2025–26ನೆಯ ಆರ್ಥಿಕ ಸಾಲಿನಲ್ಲಿ ಶೇ 8ರಷ್ಟು ಏರಿಕೆಯಾಗಿ ₹3,122 ಕೋಟಿಗೆ ತಲುಪಿದೆ. ಇದೇ ಅವಧಿಯಲ್ಲಿ ಕಂಪನಿಯ ಕಾರ್ಯಾಚರಣೆ ಲಾಭ ₹986 ಕೋಟಿಯಿಂದ ₹1,049 ಕೋಟಿಗೆ ಹೆಚ್ಚಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ₹825 ಕೋಟಿ ವರಮಾನ ಗಳಿಸಿದ್ದು, ₹269 ಕೋಟಿ ನಿವ್ವಳ ಲಾಭ ಕಂಡಿದೆ. ಉತ್ತಮ ಲಾಭದ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ₹14 ಲಾಭಾಂಶ ಘೋಷಿಸಿದೆ.

‘2025–26ನೆಯ ಹಣಕಾಸು ವರ್ಷವು ನಮಗೆ ಹಲವು ಸವಾಲುಗಳನ್ನು ಒಡ್ಡಿತ್ತು. ಮಾರುಕಟ್ಟೆ ಅಸ್ಥಿರತೆ, ಕಠಿಣ ನಿಯಮಗಳು ಮತ್ತು ತೀವ್ರ ಸ್ಪರ್ಧೆಯ ನಡುವೆಯೂ ನಾವು ಅತ್ಯುತ್ತಮ ಬೆಳವಣಿಗೆ ಕಂಡಿದ್ದೇವೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಇದಕ್ಕಾಗಿ ನಾವು ಹೊಸ ತಂತ್ರಜ್ಞಾನ ಹಾಗೂ ಎ.ಐ ಬಳಕೆ ಮಾಡುತ್ತಿದ್ದೇವೆ. ನಮ್ಮ ವ್ಯವಹಾರದ ಎಲ್ಲಾ ವಿಭಾಗಗಳಲ್ಲೂ ಲಾಭ ಹೆಚ್ಚಾಗಿದೆ’ ಎಂದು ‘ನುವಾಮಾ’ ಸಮೂಹದ ಎಂ.ಡಿ ಮತ್ತು ಸಿಇಒ ಆಶಿಷ್ ಕೆಹೈರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.