ಕಚೇರಿ ಸ್ಥಳಾವಕಾಶದ ಗುತ್ತಿಗೆ ಮುಂಚೂಣಿಯಲ್ಲಿ ಬೆಂಗಳೂರು

ಗುರುವಾರ , ಏಪ್ರಿಲ್ 25, 2019
26 °C

ಕಚೇರಿ ಸ್ಥಳಾವಕಾಶದ ಗುತ್ತಿಗೆ ಮುಂಚೂಣಿಯಲ್ಲಿ ಬೆಂಗಳೂರು

Published:
Updated:

ನವದೆಹಲಿ: ಕಚೇರಿ ಸ್ಥಳದ ಗುತ್ತಿಗೆಗೆ ಸಂಬಂಧಿಸಿದಂತೆ ದೇಶದ ಪ್ರಮುಖ 8 ನಗರಗಳ ಪೈಕಿ ಬೆಂಗಳೂರು ಮುಂಚೂಣಿಯಲ್ಲಿದೆ.

ಆಸ್ತಿ ಸಲಹಾ ಸಂಸ್ಥೆ ಕುಶ್ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ ನೀಡಿರುವ 2019ರ ಜನವರಿ–ಮಾರ್ಚ್‌ (ಮೊದಲ ತ್ರೈಮಾಸಿಕ) ಅವಧಿಯ ವರದಿಯಲ್ಲಿ ಈ ವಿವರ ಇದೆ.

ಕಚೇರಿ ಸ್ಥಳಾವಕಾಶದ ಗುತ್ತಿಗೆಯಲ್ಲಿ ಬೆಂಗಳೂರು (50 ಲಕ್ಷ ಚದರ ಅಡಿ) ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ರಾಜಧಾನಿ ಪ್ರದೇಶ, ಮುಂಬೈ ನಂತರದ ಸ್ಥಾನದಲ್ಲಿವೆ.

ಪ್ರಮುಖ 8 ನಗರಗಳಲ್ಲಿ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಕಚೇರಿ ಸ್ಥಳಾವಕಾಶದ ಗುತ್ತಿಗೆ ಶೇ 2.5ರಷ್ಟು ಏರಿಕೆಯಾಗಿದ್ದು, 1.30 ಕೋಟಿ ಚದರ ಅಡಿಗೆ ತಲುಪಿದೆ.

ಬೆಂಗಳೂರು, ದೆಹಲಿ ರಾಜಧಾನಿ ಪ್ರದೇಶ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್‌, ಪುಣೆ ಮತ್ತು ಅಹಮದಾಬಾದ್‌ ನಗರಗಳಲ್ಲಿ ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಚೇರಿ ಸ್ಥಳಾವಕಾಶದ ಗುತ್ತಿಗೆ 53 ಲಕ್ಷ ಚದರ ಅಡಿಗಳಷ್ಟಿತ್ತು.

‘ಗುಣಮಟ್ಟದ ಕಚೇರಿ ಸ್ಥಳಾವಕಾಶಕ್ಕೆ ಈಗಾಗಲೇ ಬೇಡಿಕೆ ಹೆಚ್ಚಾಗಿದೆ. 2019ರಲ್ಲಿ ಗುತ್ತಿಗೆ ಚಟುವಟಿಕೆಯಲ್ಲಿ ಇನ್ನಷ್ಟು ಏರಿಕೆ ಕಂಡುಬರುವ ಸಾಧ್ಯತೆ ಇದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನ್ಶುಲ್‌ ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

2019ರ ಕ್ಯಾಲೆಂಡರ್‌ ವರ್ಷದ ಮೊದಲ ತ್ರೈಮಾಸಿಕದಲ್ಲಿ  ಕೊ–ವರ್ಕಿಂಗ್‌ ವಿಭಾಗವು ಶೇ 20ರಷ್ಟು ಪ್ರಗತಿ ಕಂಡಿದೆ. 2018ರ ಜನವರಿ–ಮಾರ್ಚ್‌ ಅವಧಿಯಲ್ಲಿ ಶೇ 7ರಷ್ಟು ಪ್ರಗತಿ ಕಂಡಿತ್ತು. 

ಜಾಗತಿಕ ಮಟ್ಟದಲ್ಲಿ ಕೋ ವರ್ಕಿಂಗ್‌ ಸ್ಥಳಾವಕಾಶಕ್ಕಾಗಿ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ. ಹೀಗಾಗಿ ಈ ವಿಭಾಗವು 2019ರಲ್ಲಿ ಉತ್ತಮ ಪ್ರಗತಿ ಕಾಣುವ ನಿರೀಕ್ಷೆಗಳು ವ್ಯಕ್ತವಾಗುತ್ತಿವೆ ಎಂದು ಕುಶ್ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ ಸಂಸ್ಥೆ ಹೇಳಿದೆ. 

ಐಟಿ–ಬಿಪಿಎಂ ಕ್ಷೇತ್ರದಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆ ಹೆಚ್ಚಾಗುತ್ತಿದೆ. 

ಪುಣೆ ಮತ್ತು ಅಹಮದಾಬಾದ್‌ ನಗರಗಳಲ್ಲಿ ಮಾತ್ರ ಕಚೇರಿ ಗುತ್ತಿಗೆ ಚಟುವಟಿಕೆಗಳು ಇಳಿಮುಖವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !