ಶುಕ್ರವಾರ, ಸೆಪ್ಟೆಂಬರ್ 24, 2021
27 °C

ತೈಲ ಆಮದು ಅವಲಂಬನೆ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ತೈಲ ಬೇಡಿಕೆ ಹೆಚ್ಚಾಗುತ್ತಿದ್ದು, ಉತ್ಪಾದನೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಇದರಿಂದಾಗಿ ಕಚ್ಚಾ ತೈಲಕ್ಕಾಗಿ ಬೇರೆ ದೇಶಗಳ ಮೇಲಿನ ಆಮದು ಅವಲಂಬನೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ತೈಲ ಆಮದು ಪ್ರಮಾಣವನ್ನು ಶೇ 10ರಷ್ಟು ತಗ್ಗಿಸುವ ಗುರಿ ಇಟ್ಟುಕೊಂಡಿದ್ದಾರೆ. ಆದರೆ, ತೈಲ ಆಮದು ಅವಲಂಬನೆಯು ಗರಿಷ್ಠ ಮಟ್ಟವಾದ ಶೇ 84ಕ್ಕೆ ಜಿಗಿದಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ತೈಲೋತ್ಪನ್ನಗಳ ಯೋಜನೆ ಮತ್ತು ವಿಶ್ಲೇಷಣಾ ಘಟಕ (ಪಿಪಿಸಿಎ) ಮಾಹಿತಿ ನೀಡಿದೆ.

75ನೇ ವರ್ಷದ ಸ್ವಾತಂತ್ರ್ಯೋತ್ಸವದ ವೇಳೆಗೆ ಅಂದರೆ 2022ರಲ್ಲಿ ಭಾರತದ ತೈಲ ಆಮದು ಅವಲಂಬನೆಯನ್ನು ಶೇ 77 ರಿಂದ ಶೇ 67ಕ್ಕೆ ತಗ್ಗಿಸಬೇಕು. 2030ರ ವೇಳೆಗೆ ಅರ್ಧದಷ್ಟು ಕಡಿಮೆ ಮಾಡಬೇಕು ಎಂದು 2015ರ ಮಾರ್ಚ್‌ನಲ್ಲಿ ನಡೆದಿದ್ದ ‘ಊರ್ಜಾ ಸಂಗಂ’ ಸಮಾವೇಶದಲ್ಲಿ ಮೋದಿ ಹೇಳಿದ್ದರು. ಆದರೆ, ದೇಶಿ ಬಳಕೆ ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಉತ್ಪಾದನೆ ಇಳಿಮುಖವಾಗಿದೆ. ಹೀಗಾಗಿ ಆಮದು ಅವಲಂಬನೆ ಹೆಚ್ಚಾಗುತ್ತಿದೆ ಎಂದು ಪಿಪಿಎಸಿ ತಿಳಿಸಿದೆ.

ಆಮದು ಅವಲಂಬನೆ ತಗ್ಗಿಸಲು ಕೇಂದ್ರ ಸರ್ಕಾರ, ದೇಶಿ ಉತ್ಪಾದನೆ ಹೆಚ್ಚಿಸುವುದು, ಜೈವಿಕ ಇಂಧನ ಬಳಕೆಗೆ ಉತ್ತೇಜನದಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ. 

ತೈಲ ಮತ್ತು ನೈಸರ್ಗಿಕ ಅನಿಲ ಇರುವ ಹೊಸ ನಿಕ್ಷೇಪಗಳನ್ನು ಶೋಧಿಸಲು ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ ಹಲವು ಬಾರಿ ನಿಯಮಗಳಲ್ಲಿ ಬದಲಾವಣೆ ತಂದಿದೆ. ಇದರಿಂದ ಕಂಪನಿಗಳಿಗೆ ತೈಲ ಮತ್ತು ನೈಸರ್ಗಿಕ ಅನಿಲ ಇರುವ ಹೊಸ ಜಾಗಗಳನ್ನು ಶೋಧಿಸಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು